ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿ ಲಂಕೇಶ್‌ ಸಾಕ್ಷ್ಯಚಿತ್ರ ‘ಗೌರಿ’ಗೆ ಬೆಸ್ಟ್‌ ಹ್ಯೂಮನ್‌ ರೈಟ್ಸ್‌ ಪ್ರಶಸ್ತಿ

Published : 20 ಸೆಪ್ಟೆಂಬರ್ 2022, 10:15 IST
ಫಾಲೋ ಮಾಡಿ
Comments

ಪತ್ರಕರ್ತೆ ದಿವಂಗತ ಗೌರಿ ಲಂಕೇಶ್‌ ಅವರ ಕುರಿತ ಸಾಕ್ಷ್ಯಚಿತ್ರ ‘ಗೌರಿ’ಗೆ ಟೊರೆಂಟೊದಲ್ಲಿ ನಡೆದ ಮಹಿಳಾ ಚಲನಚಿತ್ರೋತ್ಸವದಲ್ಲಿ ‘ಬೆಸ್ಟ್‌ ಹ್ಯೂಮನ್‌ ರೈಟ್ಸ್‌’ ಪ್ರಶಸ್ತಿ ಲಭಿಸಿದೆ.

‘ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣ ದೇಶದಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿತ್ತು. ಈ ಸಾಕ್ಷ್ಯಚಿತ್ರವು ಭಾರತದಲ್ಲಿ ಪತ್ರಕರ್ತರು ಪ್ರತಿದಿನ ಎದುರಿಸುತ್ತಿರುವ ಮೌಖಿಕ ಮತ್ತು ದೈಹಿಕ ದಾಳಿಗಳ ವಿಷಯಗಳನ್ನು ತೆರೆದಿಟ್ಟಿದೆ.ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ 200ಕ್ಕೂ ಹೆಚ್ಚು ಪತ್ರಕರ್ತರ ಮೇಲೆ ದಾಳಿಗಳಾಗಿವೆ. ಕಳೆದ ದಶಕದಲ್ಲಿ 30ಕ್ಕೂ ಹೆಚ್ಚು ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ಮಾತ್ರವಲ್ಲ,ಗೌರಿ ಲಂಕೇಶ್‌ ಪ್ರಕಟಿಸಿದ ವರದಿಗಳ ಪರಿಣಾಮವಾಗಿ ಅವರು 80ಕ್ಕೂ ಹೆಚ್ಚು ಪ್ರಕರಣಗಳನ್ನು ರಾಜ್ಯದ ವಿವಿಧ ಕೋರ್ಟ್‌ಗಳಲ್ಲಿ ಎದುರಿಸಬೇಕಾಗಿ ಬಂತು. ಇಂಥ ಗಂಭೀರ ವಿಷಯದ ಸುತ್ತ ಸಾಕ್ಷ್ಯಚಿತ್ರ ಸ್ಪಂದಿಸಿದೆ’ ಎಂದಿದ್ದಾರೆ ಚಿತ್ರದ ನಿರ್ದೇಶಕಿ ಕವಿತಾ ಲಂಕೇಶ್‌.

‘ಈ ಸಾಕ್ಷ್ಯಚಿತ್ರ ಮಾಂಟ್ರಿಯಲ್‌ನ ದಕ್ಷಿಣ ಏಷ್ಯಾ ಫಿಲಂ ಫೆಸ್ಟಿವಲ್‌, ಡಾಕ್‌ ನ್ಯೂಯಾರ್ಕ್‌, ಆಮ್‌ಸ್ಟರ್‌ಡ್ಯಾಮ್‌ನ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಉತ್ಸವ, ಸನ್‌ಡಾನ್ಸ್‌ ಚಿತ್ರೋತ್ಸವಗಳಿಗೂ ಆಯ್ಕೆಯಾಗಿದೆ’ ಎಂದು ಕವಿತಾ ತಿಳಿಸಿದ್ದಾರೆ. ಆ್ಯಮ್‌ಸ್ಟರ್‌ಡ್ಯಾಂನ ಫ್ರೀ ಪ್ರೆಸ್‌ ಅನ್‌ಲಿಮಿಟೆಡ್‌ ‘ಗೌರಿ’ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT