ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲತಾಗೆ ಹಳ್ಳಿ ಹುಡುಗಿ ಪಾತ್ರದ ತವಕ

Last Updated 27 ಜೂನ್ 2019, 12:45 IST
ಅಕ್ಷರ ಗಾತ್ರ

ನನಗೆ ತಾಯಿಯ ಯಾವ ವಿಚಾರಗಳೂಹಿಡಿಸೊಲ್ಲ. ತಾಯಿಯನ್ನ ದ್ವೇಷಿಸುವ ಮಗಳು ನಾನು. ಅವಳು ಹೇಳಿದ್ದಕ್ಕೆಲ್ಲ ತಿರುಗಿ ಬೀಳ್ತೀನಿ. ಅಪ್ಪ ದೂರ ಆಗಿದ್ರೂ ಅಪ್ಪನೇ ಇಷ್ಟ. ಕೇಳಿದ್ದು ಕೊಡಸಲ್ಲ ಅನ್ನೋದುಅಮ್ಮನ ಹತ್ತಿರ ಕ್ಯಾತೆ ತೆಗೆಯೊಕೆ ಇರುವ ಒಂದು ನೆಪ...

ಹೀಗೆ ತಾಯಿಯನ್ನೇ ವಿರೋಧಿಸುವ ಕ್ಷಮಾ ಧಾರಾವಾಹಿಯ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲತಾ ಗಿರೀಶ್‌, ಮೊದಲಿನಿಂದಲೂ ಸಿನಿಮಾ, ಧಾರಾವಾಹಿ ಮೇಲೆ ಅಷ್ಟೇನುಆಸಕ್ತಿ ಬೆಳೆಸಿಕೊಂಡವರೇ ಅಲ್ಲ.ಲತಾ ಗಿರೀಶ್‌ ಕೊಡಗಿನವರು.ಇವರ ತಂದೆಯ ಸ್ನೇಹಿತರೊಬ್ಬರು ಮಾಡಿದ ಸಿನಿಮಾವೊಂದರ ಪ್ರೀಮಿಯರ್ ಶೋನಲ್ಲಿ ಕಿರುತೆರೆ ನಿರ್ಮಾಪಕರೊಬ್ಬರ ಕಣ್ಣಿಗೆ ಬಿದ್ದು, ಅವಕಾಶ ಪಡೆದುಕೊಂಡವರು.

ಅವಕಾಶವೇನೋ ಸಿಕ್ಕಿತು. ಆದರೆ, ಏನೂ ಗೊತ್ತಿಲ್ಲದೆ ಹೇಗೆ ನಟನೆಮಾಡೋದು, ಅದಕ್ಕೆ ತಯಾರಿ ಹೇಗೆ ಮಾಡಲಿ ಎನ್ನುವುದು ಆರಂಭದಲ್ಲಿ ಅವರ ಚಿಂತೆಯಾಗಿತ್ತಂತೆ. ಹೀಗೆ ಯೋಚಿಸುತ್ತಲೇ ಕನ್ನಡದಲ್ಲಿ ‘ಮನೆ ದೇವ್ರು’, ತೆಲುಗಿನಲ್ಲಿ ‘ಮಾವೀಡಕಾಲು’ ಧಾರಾವಾಹಿಗಳಲ್ಲಿ ನಟಿಸಿ ಬಂದಿದ್ದಾರೆ. ಜೆಮಿನಿಯಲ್ಲಿ ಆ ಧಾರಾವಾಹಿ ಪ್ರಸಾರವಾಗಿದ್ದರಿಂದ ಸನ್‌ ನೆಟ್‌ವರ್ಕ್‌ನ ಸಹಾಯದಿಂದ ಕ್ಷಮಾ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತಂತೆ.

ಮನೆದೇವ್ರು ಧಾರಾವಾಹಿಯಲ್ಲಿ ತಂಗಿಯ ಪಾತ್ರ. ಮಾವೀಡಕಲುನಲ್ಲೂ ವಿಚ್ಛೇದನಪಡೆದ ದಂಪತಿಯಮಗಳಾಗಿ ಗುರುತಿಸಿಕೊಂಡಿರುವ ಅವರಿಗೆ ಸಿಂಗಲ್‌ ಪೇರೆಂಟ್‌ ಕಥೇನೆಸಿಗುತ್ತಿರುವುದಕ್ಕೆಬೇಸರ ಇದ್ದಂತಿಲ್ಲ.ಯಾವ ಪಾತ್ರವಾದರೂ ಸರಿ ಇಷ್ಟಪಟ್ಟು ನಟಿಸಬೇಕು ಎನ್ನುವುದು ಅವರ ನಿಲುವು.

ಬಿಸಿಎ ಪದವಿ ಪಡೆದಿರುವ ಲತಾ, ಅಪ್ಪ ಅಮ್ಮನ ಅನ್ಯೋನ್ಯ ಪ್ರೀತಿಯಲ್ಲಿ ಬೆಳೆದವರು. ಅವರಿಗೆ ಅಪ್ಪನ ಪ್ರೋತ್ಸಾಹವೇ ನಟನಾ ಕ್ಷೇತ್ರದಲ್ಲಿ ತೊಡಗಿಕೊಳ್ಳುವಂತೆ ಪ್ರೇರಣೆ ನೀಡಿದೆ. ನಟನೆ ವೃತ್ತಿಯಷ್ಟೇ ಅಲ್ಲ ಬದುಕನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಲು ಅನುಕೂಲ ಮಾಡಿಕೊಟ್ಟಿದೆ ಎಂದು ಬೀಗುವ ಅವರು, ನಟನೆಗೆ ಬಂದ ಮೇಲೆ ಹೇಗೆ ಮಾತಾಡಬೇಕು, ಹೇಗಿರಬೇಕು ಎಂಬುದನ್ನು ಕಲಿತಿರುವುದಾಗಿ ವಿನಮ್ರವಾಗಿ ಹೇಳುತ್ತಾರೆ.

ಐ.ಟಿ ಕಂಪನಿಯಲ್ಲಿ ಕೆಲಸ ಸಿಕ್ಕಿದರೆಸಾಕು ಎನ್ನುತ್ತಿದ್ದವರಿಗೆ ದೊಡ್ಡ ನಟ–ನಟಿಯರನ್ನೆಲ್ಲ ಕಣ್ಮುಂದೆ ನೋಡಿ, ಬದುಕಿನ ಲಯವನ್ನು ನಟನೆಯ ವೃತ್ತಿಯಿಂದಲೇ ರೂಪಿಸಿಕೊಳ್ಳುವುದರಲ್ಲಿ ಖುಷಿ ಇದೆಯಂತೆ. ಸದಾ ಮಾತನಾಡುವ ಚಿನಕುರಳಿ ಪಾತ್ರವೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಸಿನಿಮಾಗಳಲ್ಲೂ ಈಗೀಗ ಅವಕಾಶಗಳು ಸಿಗುತ್ತಿರುವ ಅವರಿಗೆ ಹಳ್ಳಿ ಹುಡುಗಿಯ ಪಾತ್ರವೆಂದರೆ ಬಲು ಇಷ್ಟವಂತೆ.

ಯಾವುದೇ ಭಾಷೆ ಇರಲಿ, ಅತ್ಯುತ್ತಮ ಸಿನಿಮಾಗಳನ್ನು ನೋಡೋಕೆ, ಮುದ್ದುನಾಯಿ ಮರಿ ‘ಪಪ್ಪಿ’ಯೊಂದಿಗೆ ಸಮಯ ಕಳೆಯೋಕೆ ಇಷ್ಟವಂತೆ. ಯಾವುದೇ ಧಾರಾವಾಹಿ ಇರಲಿ; ಮೊದಲು ಅದರ ಕಥೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ಅದಕ್ಕೆ ಅಗತ್ಯವಿರುವಷ್ಟು ಅಭಿನಯಕ್ಕೆಸಿದ್ಧತೆ ಮಾಡಿಕೊಳ್ಳುವುದುಲತಾ ಅವರ ಅಭ್ಯಾಸ.

ಕ್ಷಮಾ ಧಾರಾವಾಹಿ ನೋಡುವ ಯಾರೇ ಎದುರು ಸಿಕ್ಕಿದರೂ ‘ಅಮ್ಮನನ್ನು ಅಷ್ಟು ಗೋಳುಹೊಯ್ಕೊಬೇಡಮ್ಮ’ ಅಂತ ಬುದ್ಧಿಮಾತು ಹೇಳ್ತಾರೆ. ಅವಾಗೆಲ್ಲ ನನಗೆ ನಗು ಬರುತ್ತೆ. ಜತೆಗೆ ಖುಷಿನೂ. ನಿಜ ಜೀವನದಲ್ಲಿ ಅಮ್ಮನ ಬಿಟ್ಟು ಸ್ವಲ್ಪ ದಿನವೂ ಇರೋಕೆ ಆಗೊಲ್ಲ. ಅಮ್ಮ ಎಂದರೆ ನನಗೆ ಒಳ್ಳೆಯ ಗೆಳತಿ’ ಎನ್ನುವುದು ಲತಾ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT