ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಶಿವರಾಜ್‌ಕುಮಾರ್‌ ದಂಪತಿ

Published 28 ನವೆಂಬರ್ 2023, 10:17 IST
Last Updated 28 ನವೆಂಬರ್ 2023, 10:17 IST
ಅಕ್ಷರ ಗಾತ್ರ

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಕನ್ನಡದ ಮೇರುನಟಿ ಲೀಲಾವತಿ ಅವರ ಮನೆಗೆ ನಟ ಶಿವರಾಜ್‌ಕುಮಾರ್‌ ಹಾಗೂ ಗೀತಾ ಶಿವರಾಜ್‌ಕುಮಾರ್‌ ಅವರು ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. 

ಮಂಗಳವಾರ ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ತೋಟದಮನೆಗೆ ಭೇಟಿ ನೀಡಿದ ಶಿವರಾಜ್‌ಕುಮಾರ್‌ ಅವರು, ಲೀಲಾವತಿ ಅವರ ಪುತ್ರ, ನಟ ವಿನೋದ್‌ ರಾಜ್‌ ಅವರಿಗೆ ಧೈರ್ಯ ತುಂಬಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಿವರಾಜ್‌ಕುಮಾರ್‌, ‘ನನಗೂ, ವಿನೋದ್‌ ಅವರಿಗೂ ಇರುವ ಆತ್ಮೀಯತೆ ನಮಗಿಬ್ಬರಿಗಷ್ಟೇ ಗೊತ್ತು. ಮಗ ಚೆನ್ನಾಗಿ ಇರಬೇಕು ಎನ್ನುವುದು ಲೀಲಾವತಿ ಅವರ ಆಸೆ. ಹೆತ್ತವರಿಗೆ ಮಕ್ಕಳು ಚೆನ್ನಾಗಿ ಇರಬೇಕು ಎನ್ನುವ ಬಯಕೆ. ವಿನೋದ್‌ ಅವರು ಧೈರ್ಯವಾಗಿರಬೇಕು. ಲೀಲಾವತಿ ಅಮ್ಮ ನನ್ನ ಧ್ವನಿ ಗುರುತಿಸಿದರು. ಅವರ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಒಂದೆಡೆ ಅವರ ಸ್ಥಿತಿ ನೋಡಿ ಬೇಸರವಾಗುತ್ತದೆ. ಆದರೆ ದೇವರ ಆಶೀರ್ವಾದವಿದೆ, ಜನರ ಪ್ರೀತಿ ಇದೆ. ಹೀಗಾಗಿ ಬೇಗ ಗುಣಮುಖರಾಗುತ್ತಾರೆ. ಲೀಲಾವತಿ ಅವರ ಹೆಸರಿನಲ್ಲಿ ಪಶು ಆಸ್ಪತ್ರೆ ಆರಂಭವಾಗಿರುವುದು ಸಂತೋಷದ ವಿಚಾರ’ ಎಂದರು.   

ಅನಾರೋಗ್ಯದಿಂದ ಬಳಲುತ್ತಿರುವ ಲೀಲಾವತಿ ಅವರನ್ನು ವಿನೋದ್‌ ರಾಜ್‌ ಆರೈಕೆ ಮಾಡುತ್ತಿದ್ದಾರೆ. ಲೀಲಾವತಿ ಅವರಿಗೆ ಸದ್ಯ ಟ್ಯೂಬ್‌ನಲ್ಲಿ ಆಹಾರ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ನಟರಾದ ಅರ್ಜುನ್‌ ಸರ್ಜಾ, ದರ್ಶನ್‌, ಅಭಿಷೇಕ್‌ ಅಂಬರೀಷ್‌ ಅವರು ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT