ವಾಷಿಂಗ್ಟನ್:ಬ್ಯಾಟ್‌ಮನ್, ಗ್ರೀನ್ ಆ್ಯರೋ, ಗ್ರೀನ್ ಲ್ಯಾಂಟರ್ನ್, ದಿ ಆವೆಂಜರ್ಸ್ ಮತ್ತು ಇನ್ನಿತರ ಹಲವು ಕಾಮಿಕ್ ಪುಸ್ತಕಗಳ ಸೂಪರ್ ಹೀರೊ ಪಾತ್ರಗಳನ್ನು ಚಿತ್ರಿಸಿದ್ದ,ದಿಗ್ಗಜ ಕಲಾವಿದ ನೀಲ್ ಆ್ಯಡಮ್ಸ್ (80) ಅವರು ಇಂದು (ಶನಿವಾರ) ನಿಧನರಾದರು.

ನೀಲ್ ನಿಧನದ ಸುದ್ದಿಯನ್ನು ಅವರ ಮಗಳು 'ವೆರೈಟಿ' ನಿಯತಕಾಲಿಕೆಗೆಖಚಿತಪಡಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ 1941ರ ಜೂನ್ 15ರಂದು ಜನಿಸಿದ ನೀಲ್, ಕಾಮಿಕ್ ಪುಸ್ತಕ ಕ್ಷೇತ್ರದಲ್ಲಿ 'ಆರ್ಚೀ ಕಾಮಿಕ್'ಗೆ ಚಿತ್ರ ಬರೆಯುವುದರೊಂದಿಗೆ ವೃತ್ತಿ ಆರಂಭಿಸಿದ್ದರು.

1968ಕ್ಕೂ ಮುನ್ನ ಅವರು ಚಿತ್ರಿಸಿದ'ಬ್ಯಾಟ್‌ಮನ್' ಮತ್ತು 'ಸ್ಪೆಕ್ಟರ್'ಸೂಪರ್ ಹೀರೊ ಪಾತ್ರಗಳು, ಅಪಾರ ಜನಪ್ರಿಯತೆ ತಂದುಕೊಟ್ಟವು. 1969ರಲ್ಲಿ ಅವರು ಡಿಸಿ ಮತ್ತು ಮಾರ್ವಲ್ ಕಾಮಿಕ್‌ಗೆ ಹವ್ಯಾಸಿ ಚಿತ್ರಕಾರರಾಗಿ ಕೆಲಸ ಆರಂಭಿಸಿದ್ದರು.

ನೀಲ್ ಅವರು ಪತ್ನಿ ಮರ್ಲಿನ್, ಐವರು ಮಕ್ಕಳು,ಆರು ಮೊಮ್ಮಕ್ಕಳು ಹಾಗೂ ಒಬ್ಬ ಮರಿಮೊಮ್ಮಗನನ್ನುಅಗಲಿದ್ದಾರೆ.

ಇದನ್ನೂ ಓದಿ:'ಸಂಗಾತಿ ಕಳೆದುಕೊಂಡು ಉಳಿಯವುದು ಕಠಿಣ': ರಿಷಿ ಕಪೂರ್ ನೆನೆದು ಭಾವುಕರಾದ ನೀತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.