ಮಂಗಳವಾರ, ಮಾರ್ಚ್ 21, 2023
25 °C
'ಲೈಗರ್' ಟ್ವಿಟರ್‌ ವಿಮರ್ಶೆ: ವಿಜಯ್‌ ದೇವರಕೊಂಡ ಅಬ್ಬರಕ್ಕೆ ಅಭಿಮಾನಿಗಳು ಉಘೇ ಉಘೇ

'ಲೈಗರ್' ಟ್ವಿಟರ್‌ ವಿಮರ್ಶೆ: ವಿಜಯ್‌ ಅಬ್ಬರ; ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬಹುನಿರೀಕ್ಷಿತ ‘ಲೈಗರ್’ ಸಿನಿಮಾ ದೇಶದಾದ್ಯಂತ ಬಿಡುಗಡೆಯಾಗಿದ್ದು ಟ್ವಿಟರ್‌ ವಿಮರ್ಶೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಭಿಮಾನಿಗಳು ಈ ಮಾಸ್‌ ಸಿನಿಮಾವನ್ನು ಸಖತ್‌ ಇಷ್ಟಪಟ್ಟಿದ್ದಾರೆ. ವಿಜಯ್‌ ದೇವರಕೊಂಡ ಬಾಕ್ಸಿಂಗ್‌ ದೃಶ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ಹಾಗೇ ತಾಯಿ ಮಗನ ಬಾಂಧವ್ಯದ ದೃಶ್ಯಗಳು ಚೆನ್ನಾಗಿವೆ ಎಂದು ವಿಜಯ್‌ ಅಭಿಮಾನಿಗಳು ಟ್ವೀಟ್‌ ಮಾಡಿ ಹೇಳುತ್ತಿದ್ದಾರೆ.

ಅನನ್ಯಾ ಪಾಂಡೆ ಕ್ಯೂಟ್‌ ಅಭಿನಯ, ವಿಜಯ್‌ ಫೈಟ್‌ಗಳು ಸಿನಿಮಾದ ಪ್ಲಸ್‌ ಪಾಯಿಂಟ್‌  ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯುತ್ತಿದ್ದಾರೆ. 

ಕೆಲವರು ಸಿನಿಮಾ ಸಾಧಾರಣವಾಗಿದೆ ಎಂದು ಹೇಳುತ್ತಿದ್ದಾರೆ. ಫೈಟರ್‌ ಜೀವನ ಕತೆಯನ್ನು ಪೇಲವವಾಗಿ ತೋರಿಸಲಾಗಿದೆ ಎಂದು ಟ್ವೀಟ್‌ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಫೈಟ್‌ಗಳ ಅಬ್ಬರ ಮಾತ್ರ ಇದೆ, ಕತೆಯೇ ಇಲ್ಲ ಎಂದು ಮತ್ತೆ ಕೆಲವರು ಟ್ವೀಟ್‌ ಮಾಡಿದ್ದಾರೆ. 

ವಿಶ್ವದ ಬಾಕ್ಸಿಂಗ್‌ ದಂತಕತೆ ಮೈಕ್‌ ಟೈಸನ್‌ ಅಭಿನಯ ಚೆನ್ನಾಗಿದೆ.ಅನನ್ಯಾ ಪಾಂಡೆ ಅವರನ್ನು ಚೆನ್ನಾಗಿ ತೋರಿಸಲಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಕ್ಯಾಮೆರಾ ಹಾಗೂ ಸಾಹಸ ನಿರ್ದೇಶನ ಬಹಳ ಚೆನ್ನಾಗಿದೆ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ. ಮತ್ತೆ ಕೆಲವರು ಸಂಗೀತಕ್ಕೆ ಸಾಧಾರಣ ರೇಟಿಂಗ್‌ ಕೊಟ್ಟಿದ್ದಾರೆ. 

ಸಿನಿಮಾ ಕುರಿತ ಕೆಲವು ಟ್ವೀಟ್‌ಗಳು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು