ಬುಧವಾರ, ಏಪ್ರಿಲ್ 21, 2021
23 °C

ಸೆಪ್ಟೆಂಬರ್ 9ಕ್ಕೆ ತೆರೆ ಮೇಲೆ ಬರಲಿದೆ ಲೈಗರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ನಟನೆ ಪ್ಯಾನ್‌ ಇಂಡಿಯಾ ಸಿನಿಮಾ ಲೈಗರ್ ಸೆಪ್ಟೆಂಬರ್ 9ಕ್ಕೆ ತೆರೆ ಕಾಣಲಿದೆ. ಡ್ಯಾಶಿಂಗ್ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾದಲ್ಲಿ ಅನನ್ಯಾ ಪಾಂಡೆ, ರಮ್ಯಾಕೃಷ್ಣ, ರೋನಿತ್ ರಾಯ್, ಅಲಿ, ಮಕರಂದ್ ದೇಶಪಾಂಡೆ ಹಾಗೂ ಗೆಟಪ್‌ ಶ್ರೀನು ಮೊದಲಾದವರು ನಟಿಸಿದ್ದಾರೆ.

ಸಿನಿಮಾ ಬಿಡುಗಡೆ ದಿನಾಂಕವನ್ನು ವಿಜಯ್ ಹಾಗೂ ಚಿತ್ರತಂಡದವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಜಯ್ ದೇವರಕೊಂಡ ‘ದಿನಾಂಕ ನಿಗದಿಯಾಗಿದೆ. ಭಾರತ ನಾವು ಬರುತ್ತಿದ್ದೇವೆ. ಸೆಪ್ಟೆಂಬರ್ 9, 2021’ ಎಂದು ಬರೆದುಕೊಂಡಿದ್ದಾರೆ.

The Date is set.
India - we are coming!
September 9, 2021. #LIGER#SaalaCrossbreed#PuriJagannadh @ananyapandayy @karanjohar @charmmeofficial @apoorvamehta18 @DharmaMovies @PuriConnects pic.twitter.com/pgclqQYiQ4

 

 

ಲೈಗರ್ ಸಿನಿಮಾವನ್ನು ತೆಲುಗು, ಹಿಂದಿಯಲ್ಲಿ ಶೂಟಿಂಗ್‌ ಮಾಡಲಾಗಿದೆ. ಈ ಸಿನಿಮಾದ ಮೂಲಕ ವಿಜಯ್ ಬಾಲಿವುಡ್‌ಗೂ ಕಾಲಿರಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ 10 ವರ್ಷಗಳ ಬಳಿಕ ಮತ್ತೆ ಬಾಲಿವುಡ್‌ಗೆ ಮರಳುತ್ತಿದ್ದಾರೆ ಪುರಿ ಜಗನ್ನಾಥ್‌.

 

ಈ ಚಿತ್ರವನ್ನು ಪುರಿ ಜಗನ್ನಾಥ್‌, ಕರಣ್ ಜೋಹರ್ ಹಾಗೂ ಚಾರ್ಮಿ ಕೌರ್ ನಿರ್ಮಾಣ ಮಾಡುತ್ತಿದ್ದಾರೆ. ಇದು ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು