ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದಿಷ್ಟು ಫನ್ನಿ, ಇನ್ನೊಂದಿಷ್ಟು ಸಸ್ಪೆನ್ಸ್‌ ಲಂಬೋದರ!

Last Updated 2 ನವೆಂಬರ್ 2018, 12:50 IST
ಅಕ್ಷರ ಗಾತ್ರ

ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಬೇಕು ಎಂಬ ಬಯಕೆ ಈಗಿನ ಯುವಕರಲ್ಲಿನ ಟ್ರೆಂಡ್‌. ತಮ್ಮ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊರದೇಶಗಳಿಗೆ ಹೋಗಲಿ ಎಂದು ಕೆಲವು ಪಾಲಕರೂ ಬಯಸುತ್ತಾರೆ. ಆದರೆ, ಮಕ್ಕಳು ವಿದೇಶಕ್ಕೆ ತೆರಳಿದ ನಂತರ ‘ಮಕ್ಕಳು ನಮ್ಮ ಜೊತೆ ಇಲ್ಲವಲ್ಲಾ’ ಎಂದು ಪಾಲಕರು ಬೇಸರ ಮಾಡಿಕೊಳ್ಳುತ್ತಾರೆ...

ಇದನ್ನೇ ಹಾಸ್ಯಮಯವಾಗಿ ಸಿನಿಮಾ ರೂಪದಲ್ಲಿ ಹೇಳಿದ್ದಾರೆ ರಾಜ್‌ ಸೂರ್ಯ. ಜೊತೆಗೆ ಒಂಚೂರು ಸಸ್ಪೆನ್ಸ್‌ ಅಂಶವನ್ನೂ ಸೇರಿಸಿದ್ದಾರೆ. ಆ ಮೂಲಕ ನಿರ್ದೇಶಕ ಪಟ್ಟಕ್ಕೆ ಪದೋನ್ನತಿ ಪಡೆದುಕೊಂಡಿದ್ದಾರೆ. ರಾಜ್ ಅವರು ತಮ್ಮ ಚಿತ್ರಕ್ಕೆ ‘ಲಂಡನ್ನಲ್ಲಿ ಲಂಬೋದರ’ ಎಂಬ ಹೆಸರಿಟ್ಟಿದ್ದಾರೆ. ಚಿತ್ರದ ಟೀಸರ್‌ ಬಿಡುಗಡೆ ಮಾಡಿ, ಒಂದಿಷ್ಟು ಮಾಹಿತಿ ನೀಡಲು ಅವರು ಸುದ್ದಿಗೋಷ್ಠಿ ಕರೆದಿದ್ದರು.

‘ರಾಜ್ ಸೂರ್ಯ ನನ್ನ ಜೊತೆ ಕೆಲಸ ಮಾಡಿದ್ದರು. ಚಿತ್ರದ ಟೀಸರ್ ಫನ್ನಿ ಆಗಿದೆ. ನಾಯಕ ಮಜವಾಗಿ ಕಾಣಿಸುತ್ತಿದ್ದಾನೆ’ ಎಂದು ಮೆಚ್ಚುಗೆ ಸೂಚಿಸಿದರು ನಿರ್ದೇಶಕ ಸಿಂಪಲ್ ಸುನಿ.

ಈ ಚಿತ್ರಕ್ಕೆ ಹಣ ಹೂಡಿಕೆ ಮಾಡಿದವರು ಕುಮಾರ್ ನಾಯಕ್. ಇವರು ಲಂಡನ್‌ನಲ್ಲಿ ವೈದ್ಯರು. ‘ಈ ಚಿತ್ರದ ಕೆಲಸಕ್ಕೆ ಕೈಹಾಕಿದಾಗ, ಹುಚ್ಚು ಹಿಡಿದಿದೆಯಾ ನಿನಗೆ ಎಂದು ಕೆಲವರು ಪ್ರಶ್ನಿಸಿದ್ದರು’ ಎಂದು ನೆನಪಿಸಿಕೊಂಡರು. ‘ಈ ಚಿತ್ರದ ಶೇಕಡಾ 60ರಷ್ಟು ಭಾಗ ಲಂಡನ್ನಿನಲ್ಲೇ ಚಿತ್ರೀಕರಣ ಆಗಿದೆ’ ಎನ್ನುತ್ತಾರೆ ಅವರು.

ಅಚ್ಯುತ್‌ ಕುಮಾರ್‌ ಅವರು ನಾಯಕನ ಅಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ‘ಚಿತ್ರದ ಮೊದಲಾರ್ಧದಲ್ಲಿ ನಾಯಕ ಉಡಾಫೆಯ ಧೋರಣೆ ತೋರಿಸುತ್ತಾನೆ. ಅದರಿಂದ ಏನಾಗುತ್ತದೆ ಎಂಬ ಕಥೆ ದ್ವಿತೀಯಾರ್ಧದಲ್ಲಿ ಇದೆ’ ಎಂದರು ನಾಯಕ ನಟ ಸಂತೋಷ್. ಚಿತ್ರವನ್ನು ಜನವರಿ ಮೊದಲ ವಾರದಲ್ಲಿ ತೆರೆಗೆ ತರುವ ಉದ್ದೇಶ ಚಿತ್ರತಂಡದ್ದು.

ಶ್ರುತಿ ಪ್ರಕಾಶ್ ಅವರು ಇದರಲ್ಲಿ ನಾಯಕಿಯ ಪಾತ್ರ ನಿಭಾಯಿಸಿದ್ದಾರೆ. ಅವರು ಬಿಗ್‌ ಬಾಸ್‌ನಿಂದ ಹೊರಬಂದ ನಂತರ ಸಿಕ್ಕ ಮೊದಲ ಅವಕಾಶವಂತೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT