ಶುಕ್ರವಾರ, ಮೇ 14, 2021
32 °C

‘ನನಗೂ ಲವ್ವಾಗಿದೆ’ ಶುರುವಾಗಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸ ಪ್ರತಿಭೆಗಳ ‘ನನಗೂ ಲವ್ವಾಗಿದೆ’ ಚಿತ್ರವೊಂದು ಸೆಟ್ಟೇರುತ್ತಿದೆ. ಹೆಸರು ಕೇಳಿದೊಡನೆ ಇದೊಂದು ಪ್ರೇಮಕಥೆ ಇರಬಹುದು ಎಂಬ ಭಾವನೆ ಬರಬಹುದು. ಆದರೆ ಇದರಲ್ಲಿ ಕುತೂಹಲಕಾರಿ ಸನ್ನಿವೇಶಗಳನ್ನು ನೋಡಬಹುದು ಎಂದಿದ್ದಾರೆ ಕತೆ ಬರೆದು ನಿರ್ಮಾಣ ಮಾಡುತ್ತಿರುವ ಕೆ.ನೀಲಕಂಠನ್.

ಚಿತ್ರದಲ್ಲಿ ನೀಲಕಂಠನ್‌ ಅವರದ್ದು ಖಳ ಪಾತ್ರ. ಶ್ರೀ ಕಾಳಿ ಅಮ್ಮನ್ ಪಿಕ್ಚರ‍್ಸ್ ಬ್ಯಾನರ್ ಅಡಿಯಲ್ಲಿ  ಚಿತ್ರ ಸೆಟ್ಟೇರಿದೆ. ಚಿತ್ರಕತೆ-ಸಂಭಾಷಣೆ-ಸಾಹಿತ್ಯ ಬಿ.ಎಸ್.ರಾಜಶೇಖರ್ ಅವರದ್ದು. ನೀಲಕಂಠನ್‌ ಅವರ ಪುತ್ರ ಸೋಮವಿಜಯ್‌ ಚಿತ್ರದ ನಾಯಕ. ತೇಜಸ್ವಿನಿರೆಡ್ಡಿ ನಾಯಕಿ.

ಆರು ಹಾಡುಗಳಿಗೆ ಬಿ.ಆರ್.ಹೇಮಂತಕುಮಾರ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ಮಧುಆರಾಧ್ಯ, ಸಾಹಸ ಸುಪ್ರೀಂಸುಬ್ಬು, ನೃತ್ಯ ಟಿ.ಕೆ.ಸತೀಶ್, ನಿರ್ಮಾಣ ನಿರ್ವಹಣೆ ಎಸ್.ಎನ್.ವೀರಣ್ಣ ಅವರದ್ದು. ಬೆಂಗಳೂರು, ಬೆಳಗಾವಿ ಮತ್ತು ಚಿಕ್ಕಮಗಳೂರು, ಸಕಲೇಶಪುರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಫ್ರೇಮ್ ಶಾಟ್ ಸ್ಟುಡಿಯೋ ಅರ್ಪಿಸುತ್ತಿರುವ ಚಿತ್ರದ ಮಹೂರ್ತ ಮೇ 17ರಂದು ನಡೆಯಲಿದೆ ಎಂದು ತಂಡವು ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು