ಸೋನಲ್ ಮೊಂತೆರೊ, ವಿರಾಟ ಬಿಲ್ವ ಜತೆಯಾಗಿ ನಟಿಸಿರುವ ‘ಲವ್ ಮ್ಯಾಟ್ರು’ ಚಿತ್ರ ಆ.22ರಂದು ತೆರೆಗೆ ಬರಲಿದೆ. ಆ.1ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಈ ಹಿಂದೆ ತಂಡ ಹೇಳಿತ್ತು. ಆದರೆ ‘ಸು ಫ್ರಂ ಸೋ’ ಚಿತ್ರದ ಅಬ್ಬರದಿಂದಾಗಿ ಆ ವಾರದ ಕೆಲ ಚಿತ್ರಗಳು ಮುಂದಕ್ಕೆ ಹೋಗಿದ್ದವು. ವಿರಾಟ ಬಿಲ್ವ ನಿರ್ದೇಶನದ ಚಿತ್ರವಿದು.

‘ಕೆಲ ದಿನಗಳ ಹಿಂದೆ ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬ ಕೊರಗಿತ್ತು. ಆದರೆ ‘ಸು ಫ್ರಂ ಸೋ’ ಚಿತ್ರ ಅದನ್ನು ಹೋಗಲಾಡಿಸಿದೆ. ಒಳ್ಳೆ ಸಿನಿಮಾಗಳು ಬಂದರೆ ಜನ ಕೂಡ ಮೊಬೈಲ್ ಬಿಟ್ಟು ಚಿತ್ರಮಂದಿರಗಳಿಗೆ ಸಿನಿಮಾ ನೋಡಲು ಬರುತ್ತಾರೆ ಎಂಬುದು ಖಾತ್ರಿಯಾಗಿದೆ. ನಮ್ಮ ಚಿತ್ರ ಕೂಡ ಅಂಥದ್ದೆ ಗಟ್ಟಿಯಾದ ಕಂಟೆಂಟ್ ಹೊಂದಿರುವ ಚಿತ್ರ. ಒಂದು ವಿಭಿನ್ನ ಪ್ರೇಮ ಕಥೆಯನ್ನು ತೆರೆಯ ಮೇಲೆ ತೋರಿಸುವುದು ನಮ್ಮ ಉದ್ದೇಶ. ಪ್ರೇಕ್ಷಕರು ಸುಲಭವಾಗಿ ಊಹಿಸುವಂತೆ ಇರುವುದಿಲ್ಲ ಚಿತ್ರಕಥೆ’ ಎಂದಿದ್ದಾರೆ ನಿರ್ದೇಶಕರು.

ವಂದನಾ ಪ್ರಿಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಲವ್ ಮ್ಯಾಟ್ರು’ ಶೀರ್ಷಿಕೆಯೇ ಹೇಳುವಂತೆ ಪ್ರೇಮ ಕಥೆಯ ಚಿತ್ರ. ಕಥಾವಸ್ತು ಬಹಳ ಕುತೂಹಲಕಾರಿಯಾಗಿದೆ. ಎರಡು ಕಾಲಘಟ್ಟಗಳ ಪಯಣ ಇರುವ ಚಿತ್ರ. ನಾನು ಪ್ರೇಮಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದಿದ್ದಾರೆ ಸೋನಲ್.

ಅಚ್ಯುತ್ ಕುಮಾರ್, ಅನಿತಾ ಭಟ್, ಸುಮನ್ ರಂಗನಾಥ್ ಮುಂತಾದವರು ಚಿತ್ರದಲ್ಲಿದ್ದಾರೆ. ಸೋಲಮಾನ್ ಸಂಗೀತ, ಪರಮ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.