ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಧರ್ಮಗಳ ಪ್ರೇಮ ಯುದ್ಧ

Last Updated 15 ಏಪ್ರಿಲ್ 2021, 13:42 IST
ಅಕ್ಷರ ಗಾತ್ರ

ಪ್ರೇಮಕ್ಕಾಗಿ ಎರಡು ಧರ್ಮಗಳ ನಡುವೆ ನಡೆಯುವುದೇ ‘ಲವ್ ವಾರ್’. ಚಿತ್ರದ ಹೆಸರೇ ಹೇಳುವಂತೆ ಎರಡು ಧರ್ಮಗಳ ಮಧ್ಯೆ ಪ್ರೇಮ ಯುದ್ಧ ನಡೆಯುತ್ತದೆ.

ಹಿಂದೂ ಹುಡುಗಿ, ಮುಸ್ಲಿಂ ಹುಡುಗ. ಧರ್ಮದ ಕಾರಣಕ್ಕಾಗಿ ಕುಟುಂಬಗಳ ನಡುವೆ ಸಂಘರ್ಷ ನಡೆಯುತ್ತದೆ.ಎಸ್‌ಕೆಎಫ್ ಬ್ಯಾನರ್ ಅಡಿಯಲ್ಲಿ ಇಮ್ರಾನ್ ಆರಿಫ್ ಪಾಶಾ ಐದು ಭಾಷೆಗಳಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಎಸ್‌. ಮಂಜು ಪ್ರೀತಮ್‌ ಅವರ ಕಥೆ, ಚಿತ್ರಕಥೆ, ನಿರ್ದೇಶನ ಈ ಚಿತ್ರಕ್ಕಿದೆ. ಸಾಹಿಲ್‌ ಖಾನ್‌ ನಾಯಕ. ಮುಂಬೈ ಮೂಲದ ಪಾಯಲ್‌ ನಾಯಕಿ.

ರವಿಶಂಕರ್, ಸಾಧುಕೋಕಿಲ ಜತೆಗೆ ತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂ ಚಿತ್ರರಂಗದ ಒಬ್ಬೊಬ್ಬ ಕಲಾವಿದರು ನಟಿಸುತ್ತಿದ್ದಾರೆ. ಸಂಗೀತ ಸಂಯೋಜಕ ಕಾರ್ತಿಕ್‌ ವೆಂಕಟೇಶ್ ಈಗ ಆರೋನ್ ಕಾರ್ತಿಕ್ ಎಂದು ನಾಮಕರಣ ಮಾಡಿಕೊಂಡಿದ್ದಾರೆ. ನಾಲ್ಕು ಹಾಡುಗಳಿಗೆ ರಾಗ ಹೊಸೆಯುತ್ತಿದ್ದಾರೆ. ಛಾಯಾಗ್ರಹಣ ಆಶು ಮೋಹನ್‌ ಕುಮಾರ್, ಸಂಕಲನ ನಾಗರಾಜ ಜಿ.ಹಾರಸೂರ್, ಸಂಭಾಷಣೆ ಚಂದ್ರು, ಸಾಹಸ ಥ್ರಿಲ್ಲರ್‌ಮಂಜು, ನೃತ್ಯ ಕರಿಯಾನಂದ ಅವರದ್ದು. ಚಿತ್ರದುರ್ಗ, ಚಿಕ್ಕಮಗಳೂರು, ಮಡಿಕೇರಿ, ಗೋವಾ ಮತ್ತು ಮಹಾರಾಷ್ಟ್ರ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT