ಹೈದಾರಾಬಾದ್: ಟಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟ ಹಾಗೂ ಅತಿ ಹೆಚ್ಚು ಮಹಿಳಾ ಅಭಿಮಾನಿಗಳನ್ನ ಹೊಂದಿರುವ ಮಹೇಶ್ ಬಾಬು, ಸದಾ ಚಿತ್ರರಂಗದಲ್ಲಿ ಬ್ಯುಸಿಯಾಗಿ ಇರುತ್ತಾರೆ.
ಆಗಾಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕುಟುಂಬದ ಜೊತೆ ಇರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಒಡನಾಟದಲ್ಲಿರುತ್ತಾರೆ.
ಇದೀಗ ಮಹೇಶ್ ಬಾಬು ಪ್ರೀತಿಯ ಮಡದಿ ನಮ್ರತಾ ಶಿರೋಡ್ಕರ್‌ರವರ ಹುಟ್ಟು ಹಬ್ಬದ ಪ್ರಯುಕ್ತ ತಮ್ಮ ಟ್ವಿಟರ್ ಖಾತೆಯಲ್ಲಿ ನಮ್ರತಾ ಫೋಟೋ ಹಂಚಿಕೊಂಡು ಅದರ ಅಡಿಬರಹದಲ್ಲಿ ’ಹುಟ್ಟು ಹಬ್ಬದ ಶುಭಾಶಯಗಳು ಎನ್‌ಎಸ್‌ಜಿ, ನಿನ್ನಂದಾಗಿ ಬದುಕಿನ ದೃಷ್ಟಿಕೋನವು ಬದಲಾಗಿದೆ ಹಾಗೂ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ನನ್ನೊಂದಿಗೆ ಸದಾ ನೀನಿರುವೆ’ ಎಂದು ಬರೆದುಕೊಂಡಿದ್ದಾರೆ.
ಟಾಲಿವುಡ್‌ನಲ್ಲಿ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ಳುವ ಈ ದಂಪತಿ, ತಮ್ಮ ಸ್ವಂತ ಎನ್‌ಜಿಒ ಮೂಲಕ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ನೆರವಾಗುತ್ತಿದ್ದಾರೆ. ಇವರ ಮಗಳು ಸಿತಾರಾ ಗಟ್ಟಮನೇನಿ ಸದಾ ಒಂದಲ್ಲಾ ಒಂದು ಫೋಟೋ ಹಂಚಿಕೊಂಡು ಸಖತ್ ಆಕ್ಟಿವ್ ಆಗಿರುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.