ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈರಲ್‌ ಆಯ್ತು ಮಹೇಶ್‌ ಬಾಬು ಹೊಸ ಲುಕ್‌

Last Updated 13 ಅಕ್ಟೋಬರ್ 2022, 10:16 IST
ಅಕ್ಷರ ಗಾತ್ರ

ತೆಲುಗು ಸ್ಟಾರ್‌ ಮಹೇಶ್‌ ಬಾಬು ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ ಅವರ ಹೊಸ ಲುಕ್‌. ಅವರ ಸ್ಟೈಲಿಸ್ಟ್‌ ಅಲಿಂ ಹಕ್ಕಿಂ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಮಹೇಶ್‌ ಬಾಬು ಚಿತ್ರ ವೈರಲ್‌ ಆಗಿದೆ. ಚಿತ್ರದಲ್ಲಿ ಸಖತ್‌ ಹಾಟ್‌ ಹಾಗೂ ಮೈನವಿರೇಳಿಸುವಂತೆ ಬಾಬು ಕಾಣಿಸುತ್ತಿದ್ದಾರೆ.

ಬಾಬು ಅವರ ಹೊಸ ಲುಕ್‌ ಅನ್ನು ಅವರ ಸಾಕಷ್ಟು ಅಭಿಮಾನಿಗಳು ಹಂಚಿಕೊಂಡಿದ್ದು, ಅವರು ಯಾವಾಗಲೂ ಹಾಟ್‌ ಮತ್ತು ಸ್ಟೈಲಿಶ್‌ ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿನ ಚಿತ್ರ ‘ಸರ್ಕಾರು ವಾರಿ ಪಾಟ’ದಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಬಾಬು, ಹೆಸರಿಡದ ಸಿನಿಮಾ ಎಸ್‌ಎಸ್‌ಎಂಬಿ 28 ಚಿತ್ರಕ್ಕಾಗಿ ಈ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಅಭಿಮಾನಿಗಳ ಲೆಕ್ಕಾಚಾರ. ತ್ರಿವಿಕ್ರಂ ಶ್ರೀನಿವಾಸ್‌ ನಿರ್ದೇಶನದ ಚಿತ್ರದಲ್ಲಿ ಸಂಯುಕ್ತಾ ಮೆನನ್‌ ಹಾಗೂ ಪೂಜಾ ಹೆಗ್ಡೆ ನಾಯಕಿಯರು. ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT