ಬಾಲಿವುಡ್ ಹಾಟ್‌ಬ್ಯೂಟಿ ಮಲೈಕಾ ಅರೋರಾ ವಾಸವಿರುವಮುಂಬೈನ ಬಾಂದ್ರಾದ ಅಪಾರ್ಟ್‌ಮೆಂಟ್ ಕಟ್ಟಡವನ್ನು ಸೀಲ್‌ಡೌನ್ ಮಾಡಲಾಗಿದೆ!

ಇದೇ ಸೋಮವಾರ ಮಲೈಕಾ ಅಪಾರ್ಟ್‌ಮೆಂಟ್ ನಿವಾಸಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ನಂತರ ಇಡೀ ಪ್ರದೇಶವನ್ನು ಕಂಟೇನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ನಂತರ, ಸೀಲ್‌ಡೌನ್ ಮಾಡಿ ಇಡೀ ಅಪಾರ್ಟ್‌ಮೆಂಟ್ ಸ್ಯಾನಿಟೈಸ್ ಮಾಡಲಾಗಿದೆ.

ಲಾಕ್‌ಡೌನ್ ಘೋಷಿಸಿದ ದಿನದಿಂದಲೇ ಮಲೈಕಾ ಮನೆಬಿಟ್ಟು ಹೊರಗೆ ಕಾಲಿಟ್ಟಿಲ್ಲ. ಮಗ ಅರ್ಹಾನ್ ಜತೆಸ್ವಯಂ ಗೃಹಬಂಧನದಲ್ಲಿದ್ದಾರೆ. ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಜತೆ ಸುತ್ತಾಟಕ್ಕೂ ಬ್ರೇಕ್ ಬಿದ್ದಿದೆ.

ಯೋಗ, ಜಿಮ್ ಮಾಡುತ್ತಮಲೈಕಾ, ಫಿಟ್ನೆಸ್ ಕಡೆ ಗಮನ ಹರಿಸಿದ್ದಾರೆ. ಬೇಜಾರಾದಾಗ ಅಡುಗೆಮನೆ ಹೊಕ್ಕು ಮಗನ ಮೇಲೆ ಹೊಸ ರುಚಿಗಳ ಪ್ರಯೋಗ ಮಾಡುತ್ತಿದ್ದಾರೆ. ಅವರು ಬೇಸನ್ ಲಾಡು ಮಾಡುವ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು.

ಉಳಿದಂತೆ ಬಾಲಿವುಡ್ ಸ್ನೇಹಿತೆಯರ ಜತೆ ಫೋನಿನಲ್ಲಿ ಹರಟೆ, ಮಾತುಕತೆ ನಡೆಸುತ್ತಾರೆ. ಬಿಡುವಾದಾಗ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಫೋಟೊ, ವಿಡಿಯೊಗಳನ್ನು ಅಪ್‌ಲೋಡ್ ಮಾಡುತ್ತ ಕಾಲ ದೂಡುತ್ತಿದ್ದಾರೆ.

ಈ ಮೊದಲು, ನಿರ್ದೇಶಕ ಕರಣ್ ಜೋಹರ್ ಮತ್ತು ಶ್ರೀದೇವಿ ಪುತ್ರಿ ಹಾಗೂ ನಟಿ ಜಾಹ್ನವಿ ಕಪೂರ್ ಅವರ ಸಹಾಯಕರಿಗೆ ಕೋವಿಡ್–19 ದೃಢಪಟ್ಟ ಹಿನ್ನೆಲೆಯಲ್ಲಿ ಇಬ್ಬರೂ 14 ದಿನ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದರು.

ಬಾಲಕಿಯೊಬ್ಬಳಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಈಚೆಗೆ ನಟ ವಿಕ್ಕಿ ಕೌಶಲ್ ವಾಸವಿರುವ ಅಪಾರ್ಟ್‌ಮೆಂಟ್ ಬಿಲ್ಡಿಂಗ್‌ನ್ನೂ ಸೀಲ್‌ಡೌನ್ ಮಾಡಲಾಗಿತ್ತು.

ಅಂತೂ, ಕೊರೊನಾ ಬಾಲಿವುಡ್ ಮಂದಿಯನ್ನೂ ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿಯಾದರೂ ಕಾಡುತ್ತಿದೆ. ಸದಾ ಶೂಟಿಂಗ್, ಪಾರ್ಟಿ ಎಂದು ಸುತ್ತಾಡುತ್ತಿದ್ದ ಬಾಲಿವುಡ್ ನಟ, ನಟಿಯರು ಕೊರೊನಾದಿಂದಾಗಿ ಮೂರು ತಿಂಗಳಿಂದ ಮನೆಯಲ್ಲಿಯೇ ಕುಳಿತಿದ್ದು,ಹೊರಗೆ ಕಾಲಿಡಲೂ ಹೆದರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.