ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ದೌರ್ಜನ್ಯ: ನಟ ಇಡವೇಳ ಬಾಬು ಬಂಧನ, ಬಿಡುಗಡೆ

Published : 25 ಸೆಪ್ಟೆಂಬರ್ 2024, 13:29 IST
Last Updated : 25 ಸೆಪ್ಟೆಂಬರ್ 2024, 13:29 IST
ಫಾಲೋ ಮಾಡಿ
Comments

ಕೊಚ್ಚಿ: ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಲಯಾಳ ನಟ ಇಡವೇಳ ಬಾಬು ಅವರನ್ನು ಬುಧವಾರ ಬಂಧಿಸಲಾಯಿತು. ಆದರೆ ಅವರು ನಿರೀಕ್ಷಣಾ ಜಾಮೀನು ಪಡೆದಿದ್ದ ಕಾರಣ, ವೈದ್ಯಕೀಯ ಪರೀಕ್ಷೆ ಮಾಡಿ ಅವರನ್ನು ಬಿಡುಗಡೆ ಮಾಡಲಾಯಿತು.

ಕೇರಳ ಸಿನಿಮಾ ರಂಗದಲ್ಲಿ ನಟಿಯ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ನ್ಯಾಯಮೂರ್ತಿ ಹೇಮಾ ಸಮಿತಿ ಸಲ್ಲಿಸಿದ ವರದಿಯ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಎರಡನೇ ಬಂಧನ ಇದಾಗಿದೆ. ಮಂಗಳವಾರ ನಟ, ಶಾಸಕ ಮುಕೇಶ್‌ ಅವರನ್ನು ಬಂಧಿಸಲಾಗಿತ್ತು. ಅವರೂ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಬಿಡುಗಡೆಯಾಗಿದ್ದರು.

ಇಂದು ಬೆಳಿಗ್ಗೆ ಕೊಚ್ಚಿಯಲ್ಲಿ ಎಸ್‌ಐಟಿ ವಿಚಾರಣೆಗೆ ಬಾಬು ಹಾಜರಾದರು. 10 ಗಂಟೆಗೆ ವಿಚಾರಣೆ ಆರಂಭವಾಯಿತು. 1 ಗಂಟೆಗೆ ಪೊಲೀಸರು ಅವರನ್ನು ಬಂಧಿಸಿದರು.

ಬಾಬು ವಿರುದ್ಧ ಆಗಸ್ಟ್‌ 28ರಂದು ಎರ್ನಾಕುಳಂ ನಗರ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮಲಯಾಳ ಸಿನಿಮಾ ಕಲಾವಿದರ ಒಕ್ಕೂಟ ‘ಅಮ್ಮ’ ಸಂಘಟನೆಯ ಸದಸ್ಯತ್ವಕ್ಕಾಗಿ ಬಾಬು ಅವರನ್ನು ಸಂಪರ್ಕಿಸಿದ್ದೆ. ಈ ವೇಳೆ ಅರ್ಜಿ ತುಂಬಲು ಫ್ಲ್ಯಾಟ್‌ಗೆ ಆಹ್ವಾನಿಸಿ ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರುದಾರೆ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT