ಕಿಶೋರ್ ಮೂಡಬಿದ್ರೆ ನಿರ್ದೇಶನದ ವಿಜಯ್ ರಾಘವೇಂದ್ರ ನಾಯಕನಾಗಿರುವ ‘ಮಾಲ್ಗುಡಿ ಡೇಸ್’ ಚಿತ್ರದ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ‘ನವರಸ ನಾಯಕ’ ಜಗ್ಗೇಶ್ ಬಿಡುಗಡೆಗೊಳಿಸಿದ್ದ ಈ ಚಿತ್ರದ ಮೊದಲ ಪೋಸ್ಟರ್ ಸಾಕಷ್ಟು ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತು. ವಿಜಯ್ ರಾಘವೇಂದ್ರ ಅವರು ಇಂತಹ ಪ್ರಯೋಗಾತ್ಮಕ ಚಿತ್ರದ ಭಾಗವಾಗುವ ಮೂಲಕ ಗಾಂಧಿನಗರದ ಪ್ರಶಂಸೆಗೆ ಪಾತ್ರವಾಗಿದ್ದರು.

ಈ ಚಿತ್ರದಲ್ಲಿನ ಅವರ ವಯಸ್ಸಾದ ಗೆಟಪ್, ಆ ನೋಟ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿರುವುದು ದಿಟ. ಕಳೆದ ವಾರ ಬಿಡುಗಡೆಗೊಂಡ ಮತ್ತೊಂದು ಪೋಸ್ಟರ್ ಕೂಡ ಸಿನಿಪ್ರಿಯರ ಮನಸ್ಸು ಸೆಳೆದಿದೆ. ಇದು ಚಿತ್ರ ಯಾವಾಗ ತೆರೆ ಕಾಣಲಿದೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಡಿಸೆಂಬರ್ ಮತ್ತು ಜನವರಿಯ ಮೊದಲ ವಾರದಲ್ಲಿ ತೆರೆ ಕಾಣುತ್ತಿರುವ ಕನ್ನಡ ಸಿನಿಮಾಗಳ ಪಟ್ಟಿ ದೊಡ್ಡದಿದೆ. ‘ಮಾಲ್ಗುಡಿ ಡೇಸ್’ ಚಿತ್ರದ ಶೂಟಿಂಗ್ ಕೂಡ ಪೂರ್ಣಗೊಂಡಿದ್ದು, ಸಿನಿಮಾ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಅಂಗಳದಲ್ಲಿದೆ. ಚಿತ್ರದ ಮೇಲೆ ಜನರ ನಿರೀಕ್ಷೆಯೂ ಹೆಚ್ಚಿದೆ. ಹಾಗಾಗಿ, ಜನವರಿಯ ಅಂತ್ಯಕ್ಕೆ ಥಿಯೇಟರ್ಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಜನವರಿ ಮೊದಲ ವಾರದಿಂದಲೇ ಪ್ರಚಾರ ಆರಂಭಿಸಲು ನಿರ್ಧರಿಸಿದೆ.

ವಿಜಯ್ ರಾಘವೇಂದ್ರ ಅವರು ಚಿತ್ರದಲ್ಲಿ ಯುವ ಸಾಹಿತಿ ಹಾಗೂ 75 ವರ್ಷದ ಮುತ್ಸದ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ‘ಇದು ನನ್ನ ವೃತ್ತಿಬದುಕಿನಲ್ಲಿ ಬಹುಮುಖ್ಯವಾದ ಚಿತ್ರ. ದೊಡ್ಡಮಟ್ಟದ ಗೆಲುವು ತಂದು ಕೊಡಲಿದೆ’ ಎನ್ನುವುದು ಅವರ ವಿಶ್ವಾಸ.

ಸಾಫ್ಟ್ವೇರ್ ಉದ್ಯೋಗಿ ಗ್ರೀಷ್ಮಾ ಶ್ರೀಧರ್ ಈ ಸಿನಿಮಾದ ನಾಯಕಿ. ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ಅವರು ಕಾಣಿಸಿಕೊಂಡಿದ್ದಾರಂತೆ. ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿದ್ದಾರೆ. ಉದಯ್ ಲೀಲಾ ಅವರ ಛಾಯಾಗ್ರಹಣವಿದೆ. ಕೆ. ರತ್ನಾಕರ್ ಕಾಮತ್ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.