ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರಹ್ಮಯುಗಂ’ ಪೌರಾಣಿಕ ಚಿತ್ರದಲ್ಲಿ ಮಮ್ಮುಟಿ 

Published 19 ಆಗಸ್ಟ್ 2023, 0:05 IST
Last Updated 19 ಆಗಸ್ಟ್ 2023, 0:05 IST
ಅಕ್ಷರ ಗಾತ್ರ

ಮಲಯಾಳಂ ಜನಪ್ರಿಯ ನಟ ಮಮ್ಮುಟಿ ಅಭಿನಯದ ‘ಬ್ರಹ್ಮಯುಗಂ’ ಪೌರಾಣಿಕ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಅನಾವರಣಗೊಂಡಿತು. ಮಲಯಾಳಂ ಸೇರಿದಂತೆ ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. 

ಎಸ್.ಶಶಿಕಾಂತ್ ಮತ್ತು ಚಕ್ರವರ್ತಿ ರಾಮಚಂದ್ರ ಅವರು ‘ನೈಟ್ ಶಿಫ್ಟ್ ಸ್ಟುಡಿಯೊ’ ಮೂಲಕ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರಾಹುಲ್‌ ಸದಾಶಿವನ್ ರಚನೆ ಹಾಗೂ ನಿರ್ದೇಶನವಿದೆ.

‘ಮಮ್ಮುಟಿಯಂತಹ ಶ್ರೇಷ್ಠ ನಾಯಕನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಕನಸು ನನಸಾಗಿದೆ. ಕೇರಳದ ಕರಾಳ ಯುಗದಲ್ಲಿ ಬೇರೂರಿರುವ ಕಥೆಯಾಗಿರುವುದು ವಿಶೇಷ. ಕೊಚ್ಚಿ, ಒಟ್ಟಪಲಂ ಸುಂದರ ತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರಿಸಲಾಗುವುದು’ ಎಂದು ನಿರ್ದೇಶಕರು ತಿಳಿಸಿದರು.

ಮಮ್ಮುಟಿ ಅವರೊಂದಿಗೆ ಅರ್ಜುನ್ ಅಶೋಕನ್, ಸಿದ್ದಾರ್ಥ್ ಭರತನ್, ಅಮಲದ್‌ ಲಿಜ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಸಂಗೀತ ಕ್ರಿಸ್ಟೋ ಕ್ಸೇವಿಯರ್, ಛಾಯಾಗ್ರಹಣ ಶೆಹನಾದ್ ಜಲಾಲ್, ಸಂಕಲನ ಶಫಿಕ್ಯೂ ಮೊಹಮ್ಮದ್ ಅಲಿ ಅವರದ್ದಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT