ಮಂಗಳವಾರ, ಸೆಪ್ಟೆಂಬರ್ 22, 2020
25 °C

ಒಟಿಟಿಯಲ್ಲಿ ಮಮ್ಮುಟ್ಟಿ ನಟನೆಯ ‘ಒನ್’ ಚಿತ್ರ ಬಿಡುಗಡೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಮ್ಮುಟ್ಟಿ ನಟನೆಯ ಮಲಯಾಳದ ‘ಒನ್’ ಪೊಟಿಲಿಕಲ್‌ ಥ್ರಿಲ್ಲರ್‌ ಕಥಾನಕ ಚಿತ್ರ. ಕಳೆದ ವರ್ಷ ಇದರ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿತ್ತು. ಇದರಲ್ಲಿ ಮಮ್ಮುಟ್ಟಿ ಕೇರಳದ ಮುಖ್ಯಮಂತ್ರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಸಂತೋಷ್‌ ವಿಶ್ವನಾಥ್‌ ನಿರ್ದೇಶನದ ಈ ಸಿನಿಮಾ ಕಳೆದ ಮೇ ತಿಂಗಳಿನಲ್ಲಿಯೇ ತೆರೆ ಕಾಣಬೇಕಿತ್ತು. ಕೋವಿಡ್‌–19 ಪರಿಣಾಮ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.

ಈ ಮೊದಲು ಚಿತ್ರತಂಡ ಥಿಯೇಟರ್‌ ಮೂಲಕ ಸಿನಿಮಾ ಬಿಡುಗಡೆಗೆ ನಿರ್ಧರಿಸಿತ್ತು. ಆದರೆ, ಚಿತ್ರಮಂದಿರಗಳು ಯಾವಾಗ ಶುರುವಾಗುತ್ತವೆ ಎಂಬುದು ನಿಖರವಾಗಿ ಗೊತ್ತಿಲ್ಲ. ಹಾಗಾಗಿ, ಒಟಿಟಿ ವೇದಿಕೆ ಮೂಲಕ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆಯಂತೆ. ಈ ಸಂಬಂಧ ನಿರ್ಮಾಪಕರು ಪ್ರಸಿದ್ಧ ಒಟಿಟಿ ವೇದಿಕೆಯನ್ನು ಸಂಪರ್ಕಿಸಿದ್ದಾರಂತೆ. ಈ ತಿಂಗಳಿನಲ್ಲಿಯೇ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ. 

ಕಳೆದ ಜುಲೈನಲ್ಲಿ ಅದಿತಿ ರಾವ್‌ ಹೈದರಿ ಮತ್ತು ಜಯಸೂರ್ಯ ನಟನೆಯ ಮಲಯಾಳದ ‘ಸೂಫಿಯುಂ ಸುಜಾತಯುಂ’ ಚಿತ್ರ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು. ಒಟಿಟಿಯಲ್ಲಿ ಬಿಡುಗಡೆಯಾದ ಮೊದಲ ಮಾಲಿವುಡ್‌ ಚಿತ್ರ ಇದು. ಈಗ ‘ಒನ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಮಮ್ಮುಟ್ಟಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು