ಮಂಗಳವಾರ, ಡಿಸೆಂಬರ್ 7, 2021
23 °C

‘ಮುಗಿಲ್‌ಪೇಟೆ’ಯಲ್ಲಿ ನಟ ರವಿಚಂದ್ರನ್‌‌ ಅವರ ‘ಪ್ರೇಮಲೋಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂರು ದಶಕಗಳ ಹಿಂದೆ ತೆರೆ ಮೇಲೆ ಬಂದಿದ್ದ ನಟ ರವಿಚಂದ್ರನ್‌ ನಟಿಸಿ, ನಿರ್ದೇಶಿಸಿದ್ದ ‘ಪ್ರೇಮಲೋಕ’ ಸಿನಿಮಾ ಹೊಸ ಪ್ರೇಮಲೋಕವನ್ನೇ ಸೃಷ್ಟಿಸಿತ್ತು. ಇದೇ ಸಿನಿಮಾದ ದೃಶ್ಯವೊಂದಕ್ಕೆ ಇದೀಗ ರವಿಚಂದ್ರನ್‌ ಅವರ ಮಗ ಮನೋರಂಜನ್‌ ಮತ್ತೆ ಜೀವತುಂಬಿದ್ದಾರೆ. 

‘ಪ್ರೇಮಲೋಕ’ದಲ್ಲಿ ರವಿಚಂದ್ರನ್‌ ಹಾಗೂ ಜೂಹಿ ಚಾವ್ಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು. ತಮ್ಮ ಹೊಸ ಚಿತ್ರ ‘ಮುಗಿಲ್‌ಪೇಟೆ’ಯಲ್ಲಿ ‘ಪ್ರೇಮಲೋಕ’ದ ದೃಶ್ಯವೊಂದನ್ನು ಮನೋರಂಜನ್‌ ಮರುಸೃಷ್ಟಿಸಿದ್ದು, ಇದರ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ದಶಕಗಳ ಹಿಂದೆ ಅಪ್ಪ ನಟಿಸಿದ್ದ ದೃಶ್ಯವನ್ನು ಮರುಸೃಷ್ಟಿಸುವ ಪ್ರಯತ್ನ ಹೆಮ್ಮೆ ತಂದಿದೆ. ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಇದನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸಲಿದ್ದಾರೆ ಎನ್ನುವುದನ್ನು ಕಾಣಲು ಕಾತುರದಿಂದಿದ್ದೇನೆ’ ಎಂದಿದ್ದಾರೆ ಮನೋರಂಜನ್‌. 

ಇತ್ತೀಚೆಗಷ್ಟೇ ಚಿತ್ರದ ವಿಡಿಯೊ ಹಾಡು ‘ತಾರೀಫು ಮಾಡಲು ತಾರೀಕು ಮೂಡಿದೆ’ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಶ್ರೀಧರ್‌ ಸಂಭ್ರಮ್‌ ಅವರ ಸಂಗೀತವಿದೆ. ಮನೋರಂಜನ್‌ ಅವರಿಗೆ ಕಯಾದು ಲೋಹರ್ ನಾಯಕಿ. ಭರತ್ ಎಸ್. ನಾವುಂದ ರಚನೆ ಹಾಗೂ ನಿರ್ದೇಶನದ ಈ ಚಿತ್ರವನ್ನು ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿದ್ದಾರೆ. ದೀಪಾವಳಿಗೆ ಚಿತ್ರ ತೆರೆಗೆ ಬರಲಿದೆ. ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು ತಾರಾಗಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು