ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಮನಸಾಗಿದೆ: ಮೂರು ದಿನಗಳಲ್ಲೇ 23 ಸಾವಿರ ಜನರ ವೀಕ್ಷಣೆ

Last Updated 30 ಅಕ್ಟೋಬರ್ 2020, 16:31 IST
ಅಕ್ಷರ ಗಾತ್ರ

ಬೀದರ್‌: ‘ತ್ರಿವಿಕ್ರಮ ರಘು ನಿರ್ದೇಶನದ ಮರಳಿ ಮನಸಾಗಿದೆ’ ಕಿರುಚಿತ್ರ ಅಕ್ಟೋಬರ್‌ 25ರಂದು ಬಿಡುಗಡೆಯಾಗಿದ್ದು, ಮೂರು ದಿನಗಳಲ್ಲೇ 23 ಸಾವಿರ ಜನರು ವೀಕ್ಷಿಸಿ ಚಲನಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ’ ಎಂದು ನಟ ನಾಗರಾಜ ಜೋಗಿ ಹೇಳಿದರು.

’ವೀಣಾ ನಂದಕುಮಾರ ಅವರ ಛಾಯಾಗ್ರಹಣ ಹಾಗೂ ಎಂ.ಎಸ್.ತ್ಯಾಗರಾಜ್‌ ಅವರ ಸಂಗೀತ ನಿರ್ದೇಶನ ಇದೆ. ಕೋಲಾರದ ಜೆಸ್ಸಿಕಾ ಅವರು ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. 13 ನಿಮಿಷದ ಚಿತ್ರವನ್ನು ಚಿಕ್ಕಮಗಳೂರಲ್ಲಿ ಚಿತ್ರೀಕರಿಸಲಾಗಿದೆ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಶೌಚ’ ಹಾಗೂ ‘ಕಿಂಗ್‌ ಆಫ್‌ ಬೀದರ್’ ಕಿರುಚಿತ್ರದಲ್ಲಿ ಅಭಿನಯಿಸಿದ್ದ ಕಾರಣ ‘ಮರಳಿ ಮನಸಾಗಿದೆ’ ಚಿತ್ರದಲ್ಲಿ ಅಭಿನಯಿಸಲು ಕಷ್ಟವಾಗಲಿಲ್ಲ. ಚಿತ್ರದ ನಾಯಕಿ ಜೆಸ್ಸಿಕಾ ಅವರಿಗೆ ಈಗಾಗಲೇ ದೊಡ್ಡ ಚಲನಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಬಂದಿದೆ. ನನಗೂ ಅನೇಕ ಆಫರ್‌ಗಳು ಬಂದಿವೆ’ ಎಂದು ಹೇಳಿದರು.

‘ಈ ಚಿತ್ರವು ಸಮಾಜಕ್ಕೆ ಅನೇಕ ಬಗೆಯ ಒಳ್ಳೆಯ ಸಂದೇಶಗಳನ್ನು ನೀಡಿದೆ. ಗಂಡು ಹೆಣ್ಣಿನ ನಡುವಿನ ಪ್ರೀತಿ ಹಾಗೂ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ನಾಯಕಿಯ ಮೇಲಿನ ಪ್ರೀತಿಯೇ ನಾಯಕನಲ್ಲಿಯ ಜವಾಬ್ದಾರಿಯನ್ನು ಜಾಗೃತಗೊಳಿಸುವ ಸಂದೇಶ ಚಿತ್ರದಲ್ಲಿದೆ’ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನಶೆಟ್ಟಿ ಮಾತನಾಡಿ, ‘ಗಡಿ ಜಿಲ್ಲೆಯ ಅಪ್ಪಟ ಕನ್ನಡದ ಪ್ರತಿಭೆ ನಾಗರಾಜ್‌ ಜೋಗಿ ಅವರು ಚಲನಚಿತ್ರದಲ್ಲಿ ಮಿಂಚುತ್ತಿರುವುದು ನಮಗೆಲ್ಲ ಖುಷಿ ತಂದಿದೆ. ಎಲ್ಲರೂ ಒಟ್ಟಿಗೆ ಕುಳಿತು ನೋಡಬಹುದಾದ ಕಿರುಚಿತ್ರ ಇದಾಗಿದೆ. ಪ್ರತಿಯೊಬ್ಬರು ಚಿತ್ರವೀಕ್ಷಿಸಿ ಗಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.

ನಿರ್ಮಾಪಕಿ ನೇಹಾ ಜೋಗಿ, ಸಂಗಮೇಶ ವಾಲೆ, ಗುರುಪ್ರಿಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT