ಬಾಲಿವುಡ್ ನಟಿ ರಾಣಿ ಮುಖರ್ಜಿ ನಟನೆಯ ‘ಮರ್ದಾನಿ 3’ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಸಿನಿಮಾ ಕೇವಲ ಮನರಂಜನೆ ನೀಡುವುದಲ್ಲದೆ, ಜನರ ಭಾವನೆಯ ಜೊತೆಗೆ ಮಾತನಾಡುವ ಶಕ್ತಿಯನ್ನು ಹೊಂದಿದೆ’ ಎಂದು ರಾಣಿ ಮುಖರ್ಜಿ ಹೇಳಿದ್ದಾರೆ.
.ರಾಣಿ ಮುಖರ್ಜಿ ಸಿನಿಪಯಣಕ್ಕೆ 30 ವರ್ಷ: ‘ಮರ್ದಾನಿ 3’ ಟ್ರೇಲರ್ ಬಿಡುಗಡೆ.‘ಮರ್ದಾನಿ’ಗೆ ಪ್ರಶಸ್ತಿ.
ಅಭಿರಾಜ್ ಮಿನವಾಲ ನಿರ್ದೇಶನದ ಮರ್ದಾನಿ 3 ಸಿನಿಮಾವನ್ನು ಆದಿತ್ಯ ಚೋಪ್ರಾ ಹಾಗೂ ಯಶ್ ರಾಜ್ ಫಿಲ್ಮ್ ನಿರ್ಮಿಸಿದ್ದಾರೆ. ರಾಣಿ ಮುಖರ್ಜಿ ಅವರು ಸಿನಿಮಾದಲ್ಲಿ ಶಿವಾನಿ ಶಿವಾಜಿ ರಾಯ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ವಿಶ್ವದಾದ್ಯಂತ ₹28 ಕೋಟಿ ಗಳಿಸಿದೆ.

ಈ ಸಿನಿಮಾ ಬಗ್ಗೆ ಮಾತಾಡಿದ ರಾಣಿ ಮುಖರ್ಜಿ, ‘ಮಾರ್ದಾನಿ 3 ಸಿನಿಮಾ ಮನರಂಜನೆಗಿಂತಲೂ ಹೆಚ್ಚಿನದನ್ನು ನೀಡುತ್ತದೆ ಎಂದು ನಂಬುವ ಪ್ರತಿಯೊಬ್ಬ ವೀಕ್ಷಕರಿಗೂ ಸೇರಿದ್ದು. ಸಿನಿಮಾ ಬಹುಶಃ ನಮ್ಮ ಆತ್ಮಸಾಕ್ಷಿಯೊಂದಿಗೆ ಮಾತನಾಡಬಹುದು. ಮರ್ದಾನಿ 3, ನಿಮ್ಮ ಮನಸ್ಸಿಗೆ ನಾಟಿದರೆ, ಗಾಸಿಗೊಳಿಸಿದರೆ ಅಥವಾ ಯೋಚಿಸುವಂತೆ ಮಾಡಿದರೆ, ಸಿನಿಮಾ ತನ್ನ ಕೆಲಸವನ್ನು ಮಾಡಿದೆ ಎಂದರ್ಥ‘ ಎಂದು ಹೇಳಿದ್ದಾರೆ.

‘ಹೆಣ್ಣು ಮಕ್ಕಳಿಗೆ ನಮ್ಮ ಸಹಾನುಭೂತಿ ಅಗತ್ಯವಿಲ್ಲ. ಅವರಿಗೆ ನಮ್ಮ ರಕ್ಷಣೆ ಬೇಕು. ಅವರಿಗೆ ಧೈರ್ಯ ಬೇಕು. ಒಂದು ಸಿನಿಮಾದಿಂದ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಬದಲಾವಣೆ ನಮ್ಮ ಮನೆಗಳಲ್ಲಿ, ನಮ್ಮ ಶಾಲೆಗಳಲ್ಲಿ, ನಮ್ಮ ಬೀದಿಗಳಲ್ಲಿ ಪ್ರಾರಂಭವಾಗಬೇಕು, ಈ ದೇಶದ ಪ್ರತಿಯೊಬ್ಬ ಮಗಳು ಸುರಕ್ಷತೆ, ಘನತೆ, ಶಿಕ್ಷಣ ಮತ್ತು ಭಯವಿಲ್ಲದೆ ಕನಸು ಕಾಣುವ ಸ್ವಾತಂತ್ರ್ಯಕ್ಕೆ ಅರ್ಹಳು‘ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.