ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಟ್ಟೇರಿತು ‘ಮಾತಂಗಿ ದೀವಟಿಗೆ’

Last Updated 7 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ದೇಶಮಾನೆ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿರುವ ಡಾ.ಸಮತಾ ದೇಶಮಾನೆ ರಚಿಸಿದ ಕನ್ನಡದ ಮೊದಲ ಮಹಿಳಾ ದಲಿತ ಆತ್ಮಕತೆ ಆಧರಿಸಿದ ಸಿನಿಮಾ ‘ಮಾತಂಗಿ ದೀವಟಿಗೆ’ಯ ಚಿತ್ರೀಕರಣ ಆರಂಭವಾಗಿದ್ದು, ಕಲಬುರಗಿಯ ವಿವಿಧ ತಾಣಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಗಾಂಧಿ ಜಯಂತಿಯಂದು ಚಿತ್ರದ ಮುಹೂರ್ತ ನಡೆದಿದೆ. ಈ ಚಿತ್ರವನ್ನು ನಿರ್ಮಿಸಿದವರು ಜಿ.ವೈ.ಪದ್ಮ. ಛಾಯಾಗ್ರಹಣ ಪಿ.ವಿ.ಆರ್.ಸ್ವಾಮಿ ಅವರದ್ದು. ಜೆ.ಎಂ. ಪ್ರಹ್ಲಾದ ಅವರು ಚಿತ್ರಕತೆ- ಸಂಭಾಷಣೆ ಬರೆದಿದ್ದು, ಮಂಜು ಪಾಂಡುಪುರ ಇದನ್ನು ನಿರ್ದೇಶಿಸಿದ್ದಾರೆ. ಈ ದಲಿತ ಆತ್ಮಕತೆಯ ಪ್ರಧಾನ ಪಾತ್ರದಲ್ಲಿ ನಾಟಕಕಾರ ಡಾ.ಡಿ.ಎಸ್.ಚೌಗಲೆ ಮತ್ತು ರಂಗಭೂಮಿ, ಚಲನಚಿತ್ರ ಕಲಾವಿದೆ ಹನುಮಕ್ಕ ಡಿ.ಮರಿಯಮ್ಮನಹಳ್ಳಿ ಅವರು ಅಭಿನಯಿಸುತ್ತಿದ್ದಾರೆ.

ಕಲಬುರಗಿಯ ಬಾಬುರಾವ ಎಂಬ ಸ್ವಾತಂತ್ರ್ಯ ಹೋರಾಟಗಾರ ವೃತ್ತಿಯಿಂದ ಚಮ್ಮಾರಿಕೆಯವನಾಗಿದ್ದು ನಂತರ ಎಮ್.ಎಸ್.ಕೆ ಮಿಲ್‌ನಲ್ಲಿ ಕಾರ್ಮಿಕನಾಗಿ ಸೇರುತ್ತಾನೆ. ಹೇಗೆ ಕಡು ಕಷ್ಟ ಮತ್ತು ಬಡತನಗಳಲ್ಲಿ ತನ್ನ ಎಂಟು ಮಕ್ಕಳನ್ನು ಬೆಳೆಸುವನೆಂಬ ಕತೆಯೇ ಈ ಚಿತ್ರದ ಜೀವಾಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT