ಬುಧವಾರ, ಏಪ್ರಿಲ್ 21, 2021
25 °C

‘ಮಾಯಾ ಬಜಾರ್‌ 2016’ ಟ್ರೇಲರ್‌: ಇಲ್ಲಿ ಹುಷಾರ್‌...ಹುಷಾರ್‌..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಆರ್‌ಕೆ (ಪಾರ್ವತಮ್ಮ ರಾಜ್‌ಕುಮಾರ್‌) ಪ್ರೊಡಕ್ಷನ್‌ ನಿರ್ಮಾಣದ ‘ಮಾಯಾ ಬಜಾರ್‌ 2016’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು ಸಿನಿ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈಗಾಗಲೇ ‘ಮಾಯಾ ಬಜಾರ್‌’ ಸಿನಿಮಾದ ಟೀಸರ್‌, ಪೋಸ್ಟರ್ ಹಾಗೂ ಲಿರಿಕಲ್ ವಿಡಿಯೊ ಸಾಂಗ್‌ ಹಿಟ್‌ ಆಗಿವೆ. ಟ್ರೇಲರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. 

‘ವಿಭಿನ್ನ ಕಥೆಯ ಪ್ರಯೋಗಾತ್ಮಕ ಚಿತ್ರ ‘ಮಾಯಾ ಬಜಾರ್‌’ ಇವತ್ತಿನ ಪೀಳಿಗೆಗೆ ತುಂಬಾ ಹತ್ತಿರವಾಗಿದೆ. ಮಧ್ಯಮವರ್ಗ ಕುಟುಂಬದ ಯುವಕರ ಪಡಿಪಾಟಲುಗಳು, ಕಳ್ಳತನವನ್ನೇ ವೃತ್ತಿಕೊಂಡವರು ಮತ್ತು ಪೊಲೀಸರ ನಡುವಿನ ಕಥಾ ಹಂದರವಿದೆ. 

ರಾಜ್‌ ಬಿ. ಶೆಟ್ಟಿ, ಪ್ರಕಾಶ್‌ ರೈ, ಅಚ್ಯುತಕುಮಾರ್, ಸಾಧುಕೋಕಿಲ, ಸುಧಾರಾಣಿ, ವಸಿಷ್ಠ ಸಿಂಹ, ಚೈತ್ರಾ ಅವರು ಅದ್ಭುತವಾಗಿ ನಟಿಸಿದ್ದಾರೆ. ರಾಧಾಕೃಷ್ಣ ರೆಡ್ಡಿ ಕಥೆ, ಚಿತ್ರಕಥೆ, ಸಂಭಾಷಣೆ ಹೊಸೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಚಿತ್ರ. 

ಪಿಆರ್‌ಕೆ ಬ್ಯಾನರ್‌ನಡಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ಎಂ. ಗೋವಿಂದು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಭಿಷೇಕ್‌ ಕಾಸರಗೋಡು ಛಾಯಾಗ್ರಹಣ, ಮಿಥುನ್‌ ಮುಕುಂದನ್‌ ಸಂಗೀತ, ಜಗದೀಶ್‌ ಸಂಕಲನ, ಯೋಗರಾಜ್‌ ಭಟ್‌, ಪವನ್‌ ಸಾಹಿತ್ಯ ಬರೆದಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿರುವ ಮಾಯಾ ಬಜಾರ್‌ ಸಿನಿಮಾ ಇದೇ 28ರಂದು ಬಿಡುಗಡೆಯಾಗಲಿದೆ.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.