ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲುಗಿನ ಚಿರಂಜೀವಿ ಪುತ್ರಿ ಶ್ರೀಜಾಳ ಮೊದಲ ಪತಿ ಶಿರೀಶ್ ಭಾರಧ್ವಜ್ ನಿಧನ

Published 19 ಜೂನ್ 2024, 13:11 IST
Last Updated 19 ಜೂನ್ 2024, 13:11 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲುಗಿನ ಜನಪ್ರಿಯ ನಟ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರಿಜಾ ಕೊನೆಡೆಲಾ ಅವರ ಮೊದಲ ಪತಿ ಶಿರೀಶ್ ಭಾರಧ್ವಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನಟಿ ಶ್ರೀರೆಡ್ಡಿ ಕೂಡ ಚಿರಂಜೀವಿಯ ಮಾಜಿ ಅಳಿಯ ಶಿರೀಶ್ ಭಾರಧ್ವಜ್ ನಿಧನ ಎಂದು ಪೋಸ್ಟ್‌ ಹಾಕಿಕೊಂಡಿದ್ದಾರೆ. 

ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಶ್ರೀಜಾ ಕೊನೆಡೆಲಾ ಹಾಗೂ ಶಿರೀಶ್ ಭಾರಧ್ವಜ್ 2007ರಲ್ಲಿ ಮದುವೆಯಾಗಿದ್ದರು. ಆದರೆ ಈ ಮದುವೆಗೆ ಚಿರಂಜೀವಿ ಕುಟುಂಬದಿಂದ ವಿರೋಧ ವ್ಯಕ್ತವಾಗಿತ್ತು. 

ಕೌಟುಂಬಿಕ ಸಮಸ್ಯೆಯಿಂದಾಗಿ ಇಬ್ಬರು 2014ರಲ್ಲಿ ವಿಚ್ಛೇದನ ಪಡೆದರು. 2018ರ ಶ್ರೀಜಾ ಮತ್ತೊಂದು ಮದುವೆಯಾದರು. ಶಿರೀಶ್ ಭಾರಧ್ವಜ್ ಕೂಡ ಎರಡನೇ ಮದುವೆಯಾದರು. 

ವೃತ್ತಿಯಲ್ಲಿ ವಕೀಲರಾಗಿದ್ದ ಶಿರೀಶ್ ಭಾರಧ್ವಜ್ ಕಳೆದ ವರ್ಷ ಬಿಜೆಪಿ ಸೇರಿ ರಾಜಕೀಯ ಜೀವನ ಆರಂಭಿಸಿದ್ದರು. ಶ್ರೀಜಾ ಹಾಗೂ ಶಿರೀಶ್ ಅವರಿಗೆ ಪುತ್ರಿ ಇದ್ದಾಳೆ. ಈಕೆಯನ್ನು ಚಿರಂಜೀವಿಯೇ ಸಾಕುತ್ತಿದ್ದಾರೆ ಎಂದು ತೆಲುಗು ಮಾಧ್ಯಮಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT