ಭಾನುವಾರ, ಜೂನ್ 26, 2022
21 °C

ಚಿರು ಪುಣ್ಯತಿಥಿ: ಪತಿಯೊಂದಿಗಿನ ಫೋಟೊ ಹಂಚಿಕೊಂಡ ಮೇಘನಾ ರಾಜ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

MeghanaRaj Instagram

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿ ಜೂನ್ 7ಕ್ಕೆ ಒಂದು ವರ್ಷವಾಗುತ್ತಿದ್ದು, ಮೊದಲ ವರ್ಷದ ಪುಣ್ಯತಿಥಿಯನ್ನು ಸೋಮವಾರ ಆಚರಿಸಲಾಗುತ್ತಿದೆ.

ಕನ್ನಡ ಚಿತ್ರರಂಗದ ಪ್ರಮುಖ ಮತ್ತು ಜನಪ್ರಿಯ ತಾರಾ ದಂಪತಿ ಮೇಘನಾರಾಜ್ ಮತ್ತು ಚಿರಂಜೀವಿ ಸರ್ಜಾ ಮದುವೆಯಾಗಿ ಕೆಲವೇ ತಿಂಗಳುಗಳಲ್ಲಿ ಚಿರಂಜೀವಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು.

ಪತಿಯನ್ನು ಕಳೆದುಕೊಂಡ ಬಳಿಕ ಸಾಮಾಜಿಕ ತಾಣಗಳಲ್ಲಿ ಆಗಾಗ ಮೇಘನಾ ರಾಜ್ ಚಿರು ಕುರಿತು ಪೋಸ್ಟ್ ಮಾಡುತ್ತಿರುತ್ತಾರೆ. ಪ್ರಸ್ತುತ ಮೊದಲ ವರ್ಷದ ಪುಣ್ಯತಿಥಿಯ ಸಂದರ್ಭದಲ್ಲಿ ಮೇಘನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿರು ಜತೆಗಿನ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ.

ಚಿರು ಕುರಿತ ಫೋಟೊ ಹಂಚಿಕೊಂಡಿರುವ ಮೇಘನಾ ರಾಜ್ ಇನ್‌ಸ್ಟಾಗ್ರಾಂ ಪೋಸ್ಟ್, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ನಾವು ಮತ್ತು ನನ್ನವನು ಎಂಬ ಅಡಿಬರಹ ನೀಡಿರುವ ಮೇಘಾನಾ-ಚಿರು ಫೋಟೊಗೆ ಅಭಿಮಾನಿಗಳು ಲೈಕ್ ಮತ್ತು ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ, ಮೇಘನಾ-ಚಿರು ದಂಪತಿಯ ಚಿತ್ರರಂಗದ ಗೆಳೆಯರು ಕೂಡ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು