ನವದೆಹಲಿ: ಜಗತ್ತಿನ ಪ್ರತಿಷ್ಠಿತ ಪ್ಯಾಷನ್ ಶೋ ಮೆಟ್ ಗಾಲಾ (Met Gala) 2025 ಆರಂಭವಾಗಿದೆ.

ಭಾರತದಿಂದ ಬಾಲಿವುಡ್ನ ಹಲವು ಕಲಾವಿದರು ಭಾಗಿಯಾಗಿದ್ದಾರೆ. ನಟ ಶಾರುಕ್ ಖಾನ್, ಗಾಯಕ ದಿಲ್ಜಿತ್ ಡಿಸೋಜಾ ಮೊದಲ ಬಾರಿಗೆ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

ಮೊದಲ ಮಗುವಿಗೆ ತಾಯಿಯಾಗುತ್ತಿರುವ ನಟಿ ಕಿಯಾರಾ ಅಡ್ವಾಣಿ ಕೂಡ ಮೆಟ್ ಗಾಲಾದಲ್ಲಿ ಹೆಜ್ಜೆ ಹಾಕಿದ್ದಾರೆ. ಪತಿ ನಿಕ್ ಜಾನಸ್ರೊಂದಿಗೆ ಪ್ರಿಯಾಂಕಾ ಚೋಪ್ರಾ ಗಮನ ಸೆಳೆದಿದ್ದಾರೆ.

2023ರಲ್ಲಿ ಮೊದಲ ಬಾರಿಗೆ ಶೋನಲ್ಲಿ ಭಾಗವಹಿಸಿದ್ದ ಆಲಿಯಾ ಭಟ್ ಈ ಬಾರಿಯೂ ಭಾಗವಹಿಸಿದ್ದಾರೆ. 2017ರಲ್ಲಿ ಭಾಗಿಯಾಗಿದ್ದ ಇಶಾ ಅಂಬಾನಿ ಈ ಬಾರಿಯ ಶೋನಲ್ಲೂ ಕಾಣಿಸಿಕೊಂಡಿದ್ದಾರೆ.

ಈ ಬಾರಿ ಭಾರತದ ವಸ್ತ್ರ ವಿನ್ಯಾಸಕಾರರಾದ ಸವ್ಯಸಾಚಿ, ಪ್ರಬಾಲ್ ಗುರುಂಗ್, ರಾಹುಲ್ ಮಿಶ್ರಾ, ಗೌರವ್ ಗುಪ್ತಾ ಜಾಗತಿಕ ವೇದಿಕೆಯಲ್ಲಿ ತಮ್ಮ ವಿಭಿನ್ನ ವಸ್ತ್ರ ವಿನ್ಯಾಸಗಳ ಮೂಲಕ ಗುರುತು ಪಡೆದುಕೊಂಡಿದ್ದಾರೆ.

ದಿಲ್ಜಿತ್ ಡಿಸೋಜಾ ಅವರು ಮಹಾರಾಜರ ರೀತಿಯಲ್ಲಿ ಉಡುಪು ತೊಟ್ಟಿದ್ದಾರೆ. ಶಾರುಕ್ ಖಾನ್ ಅವರು ಕಪ್ಪು ಬಣ್ಣದ ಉಡುಗೆ ತೊಟ್ಟು ‘ಕೆ’ ಅಕ್ಷರದ ನೆಕ್ಲೆಸ್ ತೊಟ್ಟಿದ್ದಾರೆ.

ಅಮ್ಮನಾಗುವ ಖುಷಿಯಲ್ಲಿರುವ ಕಿಯಾರಾ ಅವರು ಕಪ್ಪು ಬಣ್ಣದ ಗೌನ್ ತೊಟ್ಟಿದ್ದಾರೆ.

ಪತಿ ನಿಕ್ ಜೋನಸ್ರೊಂದಿಗೆ ಬಂದಿರುವ ಪ್ರಿಯಾಂಕಾ ಅವರಿಗೆ ಇದು 5ನೇ ಮೆಟ್ ಗಾಲಾ ಆಗಿದೆ. ಪ್ರಿಯಾಂಕಾ ಅವರು ಕ್ಲಾಸಿಕ್ ಹಾಲಿವುಡ್ ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಿಕ್ ಅವರು ಟೈಲರ್ಡ್ ಸೂಟ್ನಲ್ಲಿ ಪ್ರಿಯಾಂಕಾ ಅವರಿಗೆ ಮ್ಯಾಚ್ ಮಾಡಿಕೊಂಡಿದ್ದಾರೆ. 2017ರಲ್ಲಿ ಮೊದಲ ಬಾರಿಗೆ ಪ್ರಿಯಾಂಕಾ ಪತಿಯೊಂದಿಗೆ ಶೋಗೆ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.