ಮಿ–ಟೂ: ಹೃತಿಕ್ ರೋಷನ್ ಶಿಕ್ಷೆಗೆ ಅರ್ಹ ವ್ಯಕ್ತಿ ಎಂದ ಕಂಗನಾ 

7
ಜೀ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಕಿಡಿ

ಮಿ–ಟೂ: ಹೃತಿಕ್ ರೋಷನ್ ಶಿಕ್ಷೆಗೆ ಅರ್ಹ ವ್ಯಕ್ತಿ ಎಂದ ಕಂಗನಾ 

Published:
Updated:

ಮಿ ಟೂ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ನಟಿ ಕಂಗನಾ ರನೋಟ್‌ ಈ ಮೂಲಕ ಪುನಃ ನಟ ಹೃತಿಕ್ ರೋಷನ್ ಮೇಲೆ ಕೆಂಡಕಾರಿದ್ದಾರೆ.

ಸಿನಿಮಾ ವಲಯದಲ್ಲಿ ಯಾರೊಬ್ಬರೂ ನಟ ಹೃತಿಕ್ ರೋಷನ್ ಜತೆ ಕೆಲಸ ಮಾಡಬಾರದು. ಮಿ ಟೂ ಅಭಿಯಾನದ ಅಡಿಯಲ್ಲಿ ಹೃತಿಕ್ ಶಿಕ್ಷೆಗೆ ಅರ್ಹ ವ್ಯಕ್ತಿ ಎಂದು ಜೀ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ

ನಿರ್ದೇಶಕ ವಿಕಾಸ್ ಬಾಹ್ಲ್‌ ಕೇಳಿ ಬಂದಿರುವ ಎಲ್ಲಾ ಆರೋಪಗಳು ಸತ್ಯವಾಗಿವೆ.  ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಸಾಕಷ್ಟು ಮಂದಿ ನಮ್ಮ ಕ್ಷೇತ್ರದಲ್ಲಿದ್ದಾರೆ. ದೌರ್ಜನ್ಯ ಎಸಗುತ್ತಾರೆ, ಕಿರುಕುಳ ನೀಡುತ್ತಾರೆ. ಇಂತಹವರನ್ನು ಶಿಕ್ಷಿಸಲೇಬೇಕು ಎಂದು ಕಿಡಿಕಾರಿದ್ದಾರೆ.

ಹೃತಿಕ್ ರೋಷನ್ ಅವರ ನಿದರ್ಶನದೊಂದಿಗೆ ಮಾತನಾಡಿದ ಕಂಗನಾ, ಕೆಲವು ಮಂದಿ ತಮ್ಮ ಪತ್ನಿಯರನ್ನು ಟ್ರೋಫಿಗಳ ರೀತಿಯಲ್ಲಿ ಇಟ್ಟುಕೊಳ್ಳುತ್ತಾರೆ. ಯುವತಿಯರನ್ನು ಪತ್ನಿಯರ ರೀತಿ ಸತ್ಕರಿಸುತ್ತಾರೆ. ಅಂತಹವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.

ಇವರ ಈ ಮಾತಿಗೆ ಹೃತಿಕ್ ರೋಷನ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಇವನ್ನೂ ಓದಿ...
ಹೊರಬರುತ್ತಿರುವ ಲೈಂಗಿಕ ದೌರ್ಜನ್ಯ ಆರೋಪಗಳು: ಬಿಟ್ಟೆನೆಂದರೂ ಬಿಡದ ಮಿ–ಟೂ

ಮಿ–ಟೂ ಅಭಿಯಾನ: ಗಂಡಸರಲ್ಲಿ ನಡುಕ‌ ಶುರುವಾಗಿದೆ

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !