ಮಂಗಳವಾರ, ನವೆಂಬರ್ 24, 2020
25 °C

ಮಿರ್ಜಾಪುರ್–‌2 ಇಂದಿನಿಂದ ಅಮೆಜಾನ್‌ ಪ್ರೈಮ್‌ನಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಿರ್ಜಾಪುರ್‌-2 ವೆಬ್‌ ಸರಣಿ ಅ. 23ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಬಿತ್ತರಗೊಳ್ಳಲಿದೆ. ಮಿರ್ಜಾಪುರ ಸದ್ಯ ಅಮೆಝಾನ್‌ ಪ್ರೈಮ್‌ ವೇದಿಕೆಯ ಜನಪ್ರಿಯ ಸರಣಿ.

ಕರಣ್‌‌ ಅಂಶುಮಾನ್‌ ಮತ್ತು ಪುನೀತ್‌ ಕೃಷ್ಣ ನಿರ್ಮಾಣದ ಮಿರ್ಜಾಪುರ ಸರಣಿಯಲ್ಲಿ ರಿತೇಶ್‌ ಸಿಧ್ವಾನಿ ಮತ್ತು ಫರ್ಹಾನ್‌ ಅಖ್ತರ್‌ ಪ್ರಧಾನ ಭೂಮಿಕೆಯಲ್ಲಿದ್ದಾರೆ. 

ಪೂರ್ವ ಉತ್ತರ ಪ್ರದೇಶದ ಪಟ್ಟಣದಲ್ಲಿ ಭ್ರಷ್ಟಾಚಾರ, ಅಪರಾಧ, ಆಡಳಿತದ ವೈಫಲ್ಯ, ಮಾಫಿಯಾದ ಡಾನ್‌ಗಳ ಹಿಡಿತದ ಕಥಾವಸ್ತುವುಳ್ಳ ಸರಣಿ ಇದು. 

ಎರಡನೇ ಅವತರಣಿಕೆಯಲ್ಲಿ ಏನಿದೆ?

ಈ ಎರಡನೇ ಅವತರಣಿಕೆಯಲ್ಲಿ ಮಿರ್ಜಾಪುರದ ಭೂಗತ ಲೋಕದ ‘ರಾಜʼಪಟ್ಟಕ್ಕಾಗಿ ಗುಡ್ಡು ಪಂಡಿತ್ ಮತ್ತು ಮುನ್ನಾ ಭೈಯಾ ನಡೆಯುವ ಕಿತ್ತಾಟದ ಕಥೆಯಿದೆ. 

ಪಂಕಜ್‌ ತ್ರಿಪಾಠಿ, ದಿವ್ಯೇಂದು ಶರ್ಮಾ, ಅಲಿ ಫಝಲ್‌, ಶ್ವೇತಾ ತ್ರಿಪಾಠಿ, ರಸಿಕ ದುಗಲ್‌, ಹರ್ಷಿತಾ ಗೌರ್‌, ಶೀಬಾ ಚಡ್ಡಾ, ರಾಜೇಶ್‌ ತೈಲಂಗ್‌, ಅಮಿತ್‌ ಸಿಯಾಲ್‌, ಇಶಾ ತಲ್ವಾರ್‌, ಪ್ರಿಯಾಂಶು ಪೈನ್ಯುಲಿ, ಅಂಜುಂ ಶರ್ಮಾ ಮತ್ತು ವಿಜಯ್‌ ವರ್ಮಾ ತಾರಾಗಣದಲ್ಲಿದ್ದಾರೆ. 

ಟ್ರೈಲರ್‌ ಹೀಗಿದೆ: ಭೂಗತ ಜಗತ್ತಿನ ನಾಯಕ ಕಲೀನ್‌ ಭೈಯ್ಯಾ ಮಿರ್ಜಾಪುರದ ಜನರಿಗೆ ನಿಯಮಗಳನ್ನು ಹೇಳುತ್ತಾನೆ. ಅವನ ಪುತ್ರ ಮುನ್ನಾ ಕೂಡಾ ಇನ್ನೊಂದಿಷ್ಟು ಅವನದೇ ಆದ ನಿಯಮಗಳನ್ನೂ ಸೇರಿಸುತ್ತಾನೆ. 

ಇದೇ ವೇಳೆ ಗುಡ್ಡು ಪಂಡಿತ್‌ಗೆ ತನ್ನ ಸಹೋದರ ಹಾಗೂ ಅವನ ಪತ್ನಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲೇಬೇಕು ಎಂಬ ಉದ್ದೇಶವಿರುತ್ತದೆ. ಆದರೆ ಗುಡ್ಡು ಪಂಡಿತ್‌ ಉದ್ದೇಶವೂ ಮಿರ್ಜಾಪುರವನ್ನು ತಾನು ಆಳಬೇಕು ಎಂಬುದೇ ಆಗಿರುತ್ತದೆ. 

ಈ ‘ಸಿಂಹಾಸನ’ಕ್ಕಾಗಿ ನಡೆಯುವ ರೇಸ್‌ಗೆ ಕಲೀನ್‌ ಭೈಯ್ಯಾ ವಿರುದ್ಧ ಸೇಡು ತೀರಿಸಿಕೊಳ್ಳಲೇಬೇಕು ಎಂದು ಕಾದಿರುವ ಪಾತ್ರದಲ್ಲಿ ರತಿ ಶಂಕರ್‌ ಪಾಂಡೆ ಅವರ ಪುತ್ರ ಶರದ್‌ ಶುಕ್ಲಾ ಕಾಣಿಸಿಕೊಂಡಿದ್ದಾರೆ. ಕೊನೆಗೆ ಯಾರು, ಹೇಗೆ ಗೆಲ್ಲುತ್ತಾರೆ ಎಂಬುದೇ ಕುತೂಹಲದ ವಿಷಯ.

ಎರಡನೇ ಆವೃತ್ತಿಯ ಕಥಾವಸ್ತು ಗಟ್ಟಿಯಾಗಿದೆ. ಆ‍ಕ್ಷನ್, ಸಾಕಷ್ಟು ರಕ್ತಸಿಕ್ತ ದೃಶ್ಯಗಳನ್ನೂ ಒಳಗೊಂಡಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು