ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯೋ ಸಾವನ್‌ ವರದಿ: ಕನ್ನಡ ಹಾಡು ಕೇಳುಗರ ಸಂಖ್ಯೆ ಗಣನೀಯ ಏರಿಕೆ

Last Updated 25 ಅಕ್ಟೋಬರ್ 2019, 10:13 IST
ಅಕ್ಷರ ಗಾತ್ರ

ಬೆಂಗಳೂರು: ಸಿಲಿಕಾನ್‌ ನಗರ ಬೆಂಗಳೂರಿನಲ್ಲಿ ಕನ್ನಡ ಹಾಡುಗಳನ್ನು ಕೇಳುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಯಾಗಿದೆ ಎಂದುಸಂಗೀತ ಸ್ಟ್ರೀಮಿಂಗ್ ಆ್ಯಪ್‌ ಜಿಯೊ ಸಾವನ್‌ ತಿಳಿಸಿದೆ.

ಇತ್ತೀಚಿಗೆಜಿಯೋಸಾವನ್‌ ಹಾಗೂಕೆಲವು ಸಂಗೀತ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಹಂಚಿಕೊಂಡ ಮಾಹಿತಿಪ್ರಕಾರ ನಗರದಲ್ಲಿನ ಸಂಗೀತ ಪ್ರಿಯರು ಕನ್ನಡದ ಹಾಡುಗಳಿಗಾಗಿ ಅತಿ ಹೆಚ್ಚು ಸ್ಟ್ರೀಮ್‌ಗಳನ್ನು ನೋಂದಾಯಿಸಿದ್ದಾರೆ.ಹಿಂದಿನ ಒಂಬತ್ತು ತಿಂಗಳುಗಳಿಗೆ ಹೋಲಿಸಿದರೆ (ಏಪ್ರಿಲ್ 2018 ಮತ್ತು ಡಿಸೆಂಬರ್ 2018ರ ನಡುವೆ) ಕನ್ನಡದಸಂಗೀತ ಸ್ಟ್ರೀಮ್‌ಗಳು 2019ರಲ್ಲಿ563ರಷ್ಟು ಹೆಚ್ಚಾಗಿದೆ.

ಕನ್ನಡ ಸಂಗೀತ ಸ್ಟ್ರೀಮಿಂಗ್‌ಚಟುವಟಿಕೆಯಲ್ಲಿ ಜನಪ್ರಿಯ ಗಾಯಕರಾದವಿಜಯ್‌ಪ್ರಕಾಶ್‌, ಎಸ್‌ಪಿ ಬಾಲಸುಬ್ರಹ್ಮಣ್ಯಂ, ಹಾಗೂಕೆ.ಎಸ್.ಚಿತ್ರಾ ಪ್ರಾಬಲ್ಯ ಹೊಂದಿದ್ದಾರೆ.ಆದರೆ, ಇತ್ತೀಚಿಗೆ ತೆರೆಕಂಡ ‘ಯಜಮಾನ’ಚಿತ್ರದ ಶೀರ್ಷಿಕೆ ಗೀತೆ, ‘ಪೈಲ್ವಾನ್’ ಚಿತ್ರದ ‘ದೋರಸಾನಿ’, ‘ಅಮರ್‌’ ಚಿತ್ರದ ‘ಮರೆತುಹೋಯಿತೇ’ ಹಾಡುಗಳು ಕೇಳುಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.

‘ಅಮರ್‌’ ಚಿತ್ರದಲ್ಲಿ ಅಭಿಷೇಕ್‌ ಮತ್ತು ತಾನ್ಯಾ ಹೋಪ್
‘ಅಮರ್‌’ ಚಿತ್ರದಲ್ಲಿ ಅಭಿಷೇಕ್‌ ಮತ್ತು ತಾನ್ಯಾ ಹೋಪ್

‘ಚಿಲ್‌ ಮಾಡಿ’,‘ಸಕತ್‌ ಸ್ಯಾಂಡಲ್‌ವುಡ್‌’ನಲ್ಲಿ ಕನ್ನಡ ಹಾಡುಗಳನ್ನು ಹುಡುಕುವವರ ಪ್ರಮಾಣ ಹೆಚ್ಚಾಗಿದೆ.

ಸ್ಪಾಟಿಫೈ ಮ್ಯೂಸಿಕ್ ಸ್ಟ್ರೀಮಿಂಗ್ ಅಪ್ಲಿಕೇಶನ್ ವರದಿ ಪ್ರಕಾರ, ಬೆಂಗಳೂರಿನಲ್ಲಿ‘ಪೈಲ್ವಾನ್’ ಚಿತ್ರದ (ದೋರಸಾನಿಮತ್ತು ಕಣ್ಣಮಣಿಯೇ) ಮತ್ತು ‘ಭರಾಟೆ’ಚಿತ್ರದಹಾಡುಗಳನ್ನು ಹೆಚ್ಚು ಜನ ಕೇಳುತ್ತಿದ್ದಾರೆ.

ಕೆಜಿಎಫ್‌ ಸಿನಿಮಾ ತೆರೆಕಂಡುಒಂದು ವರ್ಷ ಹಳೆಯದಾಗಿದ್ದರೂ, ಚಿತ್ರದ ಹಾಡುಗಳಿಗೆಸ್ಪಾಟಿಫೈನಲ್ಲಿ ಉತ್ತ,ಮ ಪ್ರತಿಕ್ರಿಯೆ ವ್ಯಕ್ತವಾಗಿದೆ. (ವಿಶೇಷವಾಗಿ ‘ಸಲಾಂ ರಾಕಿ ಭಾಯ್‌’ ಮತ್ತು ‘ಸುಲ್ತಾನ್’)ಇತರೆಟ್ರೆಂಡಿಂಗ್ ಹಾಡುಗಳಲ್ಲಿ ‘ಸಿಂಗಾ’ ಚಿತ್ರದ ‘ ಶ್ಯಾನೆ ಟಾಪಗ್ವಳೇ‘ಮತ್ತು ‘ಅಮರ್’ ಚಿತ್ರದ ‘‘ಮರೆತುಹೋಯಿತೇ’ ಹಾಡುಗಳು ಸ್ಥಾನ ಪಡೆದಿವೆ.

ಬೆಂಗಳೂರಿನಲ್ಲಿಸ್ಪಾಟಿಫೈಸ್ಟ್ರೀಮಿಂಗ್‌ ಗಾಯಕರಾದಸೋನು ನಿಗಮ್‌, ಸಂಜಿತ್‌ಹೆಗ್ಡೆ, ವಿಜಯ್‌ಪ್ರಕಾಶ್‌ಮತ್ತು ಅನೂಪ್ ಸೀಲಿನ್ ಹಾಡುಗಳನ್ನು ಹೆಚ್ಚು ಕೇಳುತ್ತಾರೆ.

ಭಾರತೀಯರು ಸಂಗೀತವನ್ನು ಹೆಚ್ಚು ಪ್ರೀತಿಸುತ್ತಾರೆ

ಜಾಗತಿಕ ಅಧ್ಯಯನವೊಂದರಪ್ರಕಾರ, ಭಾರತೀಯರು ಪ್ರಪಂಚದ ಇತರ ದೇಶದವರಿಗೆ ಹೋಲಿಸಿದರೆಸಂಗೀತಕೇಳುವುದರಲ್ಲಿಹೆಚ್ಚು ಸಮಯ ಕಳೆಯುತ್ತಾರೆ ಎಂದು ಹೇಳಲಾಗಿದೆ.

ಈ ಎಲ್ಲ ಸಂಶೋಧನೆಗಳು ಭಾರತೀಯ ಸಂಗೀತ ಉದ್ಯಮ (ಐಎಂಐ) ಹೊರತಂದ 2019ರ ಡಿಜಿಟಲ್ ಮ್ಯೂಸಿಕ್ ಸ್ಟಡಿಯನ್ನು ಆಧರಿಸಿವೆ. ಸಂಶೋಧನೆಗಳನ್ನುಭಾರತದ ಒಂಬತ್ತು ಭೌಗೋಳಿಕ ಸ್ಥಳಗಳಲ್ಲಿನಡೆಸಲಾಗಿದೆ.

ಒಬ್ಬ ಭಾರತೀಯ ಒಂದು ವಾರಕ್ಕೆ 19.1 ಗಂಟೆಸಂಗೀತವನ್ನು ಕೇಳುತ್ತಾನೆ, ಇದು ಜಾಗತಿಕ ಸರಾಸರಿ 18 ಗಂಟೆಗಳಿಗಿಂತ ಹೆಚ್ಚಾಗಿದೆ ಎಂದು ಅಧ್ಯಯನ ಹೇಳುತ್ತದೆ.ಕೇಳುಗರುಬಾಲಿವುಡ್‌ಸಂಗೀತದಹೊರತಾಗಿ, ಪ್ರಾದೇಶಿಕ ಭಾಷೆಗಳಾದ ತಮಿಳು, ತೆಲುಗು ಮತ್ತು ಬಂಗಾಳಿ ಭಾಷೆಯ ಹಾಡುಗಳನ್ನು ಕೇಳುತ್ತಾರೆ.

’ಕೆಜಿಎಫ್‌‘ ಚಿತ್ರದಲ್ಲಿ ಯಶ್‌
’ಕೆಜಿಎಫ್‌‘ ಚಿತ್ರದಲ್ಲಿ ಯಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT