‘ಮತ್ತೆ ಮಳೆ ಹೊಯ್ಯುತ್ತಿದೆ’ ಕೆ.ಸದಾಶಿವ ಅವರ ಬಹುಜನಪ್ರಿಯ ಕಥೆ. ಯು.ಆರ್. ಅನಂತಮೂರ್ತಿ ಅವರ ಕವಿತೆಯ ಸಾಲಿನಿಂದ ಪ್ರೇರಿತ ಈ ಕಥೆ, ಅದೇ ಶೀರ್ಷಿಕೆಯಲ್ಲಿಯೇ ಸಿನಿಮಾವಾಗಿದೆ. ‘ಎಲ್ಲ ನೆನಪಾಗುತಿದೆ’ ಎಂಬ ಅಡಿಬರಹ ಚಿತ್ರಕ್ಕಿದೆ. ಪರಮ್ ಗುಬ್ಬಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

‘ಇದು ಕೆ.ಸದಾಶಿವ ಅವರ ಸಣ್ಣಕಥೆ. ಅವರ ಕುಟುಂಬದವರ ಅನುಮತಿ ಪಡೆದು ಚಿತ್ರ ಮಾಡಿದ್ದೇವೆ. ಚಿತ್ರವು ಎರಡು ಕಾಲಘಟ್ಟಗಳ ಸನ್ನಿವೇಶಗಳನ್ನು ಹೊಂದಿದೆ. ಮೊದಲನೇ ಜೋಡಿಯ ಪ್ರೇಮಕಥೆ ವಿಫಲವಾಗುತ್ತದೆ. ಎರಡನೇ ಜೋಡಿಯದ್ದು ಸಫಲವಾಗುತ್ತದೆ. ಇವೆರೆಡರ ನಡುವಿನ ಸನ್ನಿವೇಶಗಳು ಮನಸ್ಸನ್ನು ಕದಡುತ್ತವೆ. ಸಿನಿಮಾದಲ್ಲಿ ಮಳೆಯು ಮಹತ್ವದ ಪಾತ್ರವನ್ನು ವಹಿಸಿದೆ. ಜತೆಗೆ ಅರ್ಥಪೂರ್ಣ ಸಂದೇಶಗಳು ಅಲ್ಲಲ್ಲಿ ಬರುತ್ತವೆ. ಶೃಂಗೇರಿ, ಹೊರನಾಡು, ಕೊಪ್ಪ, ಹರಿಹರಪುರ, ಆಗುಂಬೆ ಸುಂದರ ತಾಣಗಳಲ್ಲಿ ಇಪ್ಪತ್ತನಾಲ್ಕು ದಿನಗಳಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದೇವೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು, ಅಕ್ಟೋಬರ್ನಲ್ಲಿ ಚಿತ್ರ ತೆರೆಗೆ ತರಲು ಚಿಂತನೆ ನಡೆಸಲಾಗಿದೆ. ಕಬಡ್ಡಿ ನರೇಂದ್ರಬಾಬು ಈ ಸಿನಿಮಾ ಆಗಲು ಮುಖ್ಯ ಕಾರಣ’ ಎಂದರು ನಿರ್ದೇಶಕರು.

ಗಂಗಾಧರ್ ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ್ಸ್ ಬ್ಯಾನರ್ನಲ್ಲಿ ಬಂಡವಾಳ ಹೂಡಿದ್ದಾರೆ. ಕಬಡ್ಡಿ ನರೇಂದ್ರಬಾಬು ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಬರೆದಿದ್ದಾರೆ. ಜಿ.ಲಿಖಿತ್ ಹಾಗೂ ಜಯವರ್ಧನ್ ನಾಯಕರು. ಸುಲಕ್ಷ ಖೈರ, ಭೂಮಿಕ ಗೌಡ ನಾಯಕಿಯರು. ಇವರೊಂದಿಗೆ ಚಂದ್ರಶೇಖರ ರೆಡ್ಡಿ ಎ.ಎಂ, ಪ್ರಕಾಶ್ಮೂರ್ತಿ, ಕುಮಾರಿ ಸ್ವರ್ಣ, ಶೃತಿ, ದಿನಮಣಿ, ಕಾವ್ಯ ಕುಮಾರಿ ಮುಂತಾದವರು ಅಭಿನಯಿಸಿದ್ದಾರೆ.

‘80ರ ದಶಕದಲ್ಲಿ ನಡೆಯುವ ಬಹಳ ಸುಂದರವಾದ ಕಥೆಯಿದು. ಇವತ್ತು ಸಾಹಿತ್ಯ, ಕಾದಂಬರಿಗಳನ್ನು ಚಿತ್ರವಾಗಿಸುವ ವಾಡಿಕೆ ಕಡಿಮೆಯಾಗಿದೆ. ಆದರೆ ನಾವು ಕಮರ್ಷಿಯಲ್ಲಾಗಿರುವ ಅಚ್ಚುಕಟ್ಟಾದ ಸಿನಿಮಾ ಮಾಡಿದ್ದೇವೆ. ಒಳ್ಳೆಯ ಕಥೆಗಳನ್ನು ಸಿನಿಮಾ ಮಾಡುವುದರಿಂದ ಆ ಕಥೆಗಳು ಇನ್ನಷ್ಟು ಜನರಿಗೆ ತಲುಪುತ್ತವೆ’ ಎಂದರು ನರೇಂದ್ರಬಾಬು.

ಶಾಂತಾರಾವ್ ಇಪಿಲಿ ಛಾಯಾಚಿತ್ರಗ್ರಹಣ, ಧನುಷ್ ವೀರ್ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.