ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದೇ ಗೋವಾದಲ್ಲಿ ಮದುವೆ ಸಿದ್ದತೆ ನಡೆಸಿದ ಕೆಜಿಎಫ್ ಬೆಡಗಿ ಮೌನಿ ರಾಯ್

Last Updated 12 ಜನವರಿ 2022, 12:56 IST
ಅಕ್ಷರ ಗಾತ್ರ

ಬೆಂಗಳೂರು: ಕಿರುತೆರೆ ಹಾಗೂ ಬಾಲಿವುಡ್ ಸ್ಟಾರ್ ಮೌನಿ ರಾಯ್ ಇತ್ತೀಚೆಗೆ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಅವರ ಮದುವೆ ಬಗ್ಗೆ ಮಾತು ಕೇಳಿ ಬಂದಿದ್ದು ಶೀಘ್ರದಲ್ಲೇಅವರು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಮೌನಿ ರಾಯ್ ವರಿಸಲಿದ್ದಾರೆ ಎನ್ನುವುದು ಈಗಾಗಲೇ ಖಾತ್ರಿಯಾಗಿದೆ. ಜನವರಿ 27 ರಂದು ದಕ್ಷಿಣ ಗೋವಾದ ಫೈವ್ ಸ್ಟಾರ್ ಹೋಟೆಲ್‌ನ ಕಡಲ ತೀರದ ಬಳಿ ಸೂರಜ್‌–ಮೌನಿ ವಿವಾಹ ಏರ್ಪಡಲಿದೆ ಎಂದು ನ್ಯೂಸ್ 18 ವರದಿ ಮಾಡಿದೆ.

ಜನವರಿ 26 ರಂದು ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಕೆಲವೇ ಕೆಲವು ಆಪ್ತರಿಗೆ ಆಮಂತ್ರಣ ಇರಲಿದೆ ಎನ್ನಲಾಗಿದೆ. ಆದರೆ, ಈ ವಿಷಯವನ್ನು ಇನ್ನೂ ಮೌನಿ ರಾಯ್ ಖಚಿತಪಡಿಸಿಲ್ಲ. ಗೋವಾದಲ್ಲಿ ಮದುವೆ ಸಿದ್ದತೆ ಜೋರಾಗಿ ನಡೆದಿದೆ ಎನ್ನಲಾಗಿದೆ.

ಈ ಹಿಂದೆ ಮದುವೆ ವಿಚಾರವನ್ನು ಮೌನಿ ಸಹೋದರ ವಿದ್ಯುತ್ ರಾಯ್ ಸರ್ಕಾರ್, ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ, ಮೌನಿ ಮಾತ್ರ ಈ ವಿಚಾರದಲ್ಲಿ ಮೌನ ಮುರಿದಿಲ್ಲ.

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ದುಬೈನಲ್ಲಿಯೇ ಇದ್ದ ಮೌನಿ, ಸೂರಜ್ ಜೊತೆ ಓಡಾಡಿಕೊಂಡಿದ್ದರು. ಸೂರಜ್‌ರನ್ನು ಮೌನಿ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.

ಮೌನಿ ರಾಯ್ ಕೆಜಿಎಫ್ ಚಾಪ್ಟರ್1ರ ಹಿಂದಿ ಆವೃತ್ತಿಯಲ್ಲಿ 'ಗಲೀ ಗಲೀ' ಐಟಂ ನೃತ್ಯದಲ್ಲಿ ಕಾಣಿಸಿಕೊಂಡಿದ್ದರು. ಇದು ಬಾಲಿವುಡ್‌ನಲ್ಲಿ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು.

ಅಂದಹಾಗೇ ಮೌನಿ ರಾಯ್‌ಗೆ ಇನ್‌ಸ್ಟಾಗ್ರಾಂನಲ್ಲಿ 20 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT