ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳವಾಗಿ ನಡೆಯಿತು ಅಭಿಷೇಕ್‌ ಅಂಬರೀಷ್‌–ಅವಿವಾ ಬಿದ್ದಪ್ಪ ನಿಶ್ಚಿತಾರ್ಥ

Last Updated 11 ಡಿಸೆಂಬರ್ 2022, 7:00 IST
ಅಕ್ಷರ ಗಾತ್ರ

ಯಂಗ್‌ ರೆಬೆಲ್‌ ಸ್ಟಾರ್‌, ನಟ ಅಭಿಷೇಕ್‌ ಅಂಬರೀಷ್‌ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅಭಿಷೇಕ್‌ ಅಂಬರೀಷ್‌ ಹಾಗು ಮಾಡೆಲ್‌ ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ಭಾನುವಾರ(ಡಿ.11) ನಡೆದಿದ್ದು, ಚಿತ್ರರಂಗದ ಕಲಾವಿದರು ಜೋಡಿಗೆ ಶುಭ ಹಾರೈಸಿದ್ದಾರೆ.

ಅಭಿಷೇಕ್‌ ಅಂಬರೀಷ್‌–ಅವಿವಾ ಬಿದ್ದಪ್ಪ ಮದುವೆ ವಿಚಾರ ಕೆಲ ವಾರದ ಹಿಂದೆಯೇ ಗಾಳಿ ಸುದ್ದಿಯಾಗಿತ್ತು. ಪ್ರೆಸ್‌ಮೀಟ್‌ಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಕೂಡಲೇ ಅಭಿಷೇಕ್‌ ಅವರು ಈ ವಿಷಯವನ್ನು ರಹಸ್ಯವಾಗಿರಿಸುವ ಪ್ರಯತ್ನ ಮಾಡಿದ್ದರು.

ಭಾನುವಾರ ಸರಳವಾಗಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕೇವಲ ಕುಟುಂಬ ಸದಸ್ಯರು ಹಾಗೂ ಆಪ್ತರಷ್ಟೇ ಇದ್ದರು. ಅವಿವಾ ಬಿದ್ದಪ್ಪ 'ಫ್ಯಾಷನ್‌ ಗುರು'ಪ್ರಸಾದ್‌ ಬಿದ್ದಪ್ಪ ಅವರ ಮಗಳು. ಈ ಜೋಡಿ ಕಳೆದ ಕೆಲ ಸಮಯದಿಂದ ಪ್ರೀತಿಯಲ್ಲಿತ್ತು. ನಟಿ, ಸಂಸದೆ ಸುಮಲತಾ ಅಂಬರೀಷ್‌ ಕಾರ್ಯಕ್ರಮದಲ್ಲಿದ್ದು ನವಜೋಡಿಗೆ ಆಶೀರ್ವದಿಸಿದರು. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರೂ ಭಾಗವಹಿಸಿದ್ದರು.

ಸದ್ಯ ‘ಬ್ಯಾಡ್‌ ಮ್ಯಾನರ್ಸ್‌’ ಪ್ರಾಜೆಕ್ಟ್‌ ಪೂರ್ಣಗೊಳಿಸಿರುವ ಅಭಿಷೇಕ್‌, ಕೃಷ್ಣ ಅವರು ಆ್ಯಕ್ಷನ್‌ ಕಟ್‌ ಹೇಳುತ್ತಿರುವ 'ಕಾಳಿ'ಸಿನಿಮಾ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ‘ಅಮರ್‌’ ಚಿತ್ರದ ಮುಖಾಂತರ ಚಂದನವನಕ್ಕೆ ಕಾಲಿಟ್ಟಿದ್ದ ಅಭಿಷೇಕ್‌, ‘ಮದಗಜ’, ‘ಅಯೋಗ್ಯ’ ಸಿನಿಮಾ ಖ್ಯಾತಿಯ ಮಹೇಶ್‌ ಕುಮಾರ್‌ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಅಲೆ’ ಚಿತ್ರದ ಮುಖಾಂತರ ಅವಿವಾ ಕೂಡಾ ಚಂದನವನದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿದ್ದರು. ಸಿನಿಮಾಗಿಂತಲೂ ಮಾಡೆಲಿಂಗ್‌ ಕ್ಷೇತ್ರದಲ್ಲೇ ಅವಿವಾ ಖ್ಯಾತಿ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT