ಶನಿವಾರ, ಮೇ 28, 2022
30 °C

ಸಂಗೀತ ನಿರ್ದೇಶಕ ಕೋಟಿ ಪುತ್ರ ರಾಜೀವ್‌ಸಲೂರಿ ಅಭಿನಯದ 11:11 ಶೀರ್ಷಿಕೆ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖ್ಯಾತ ಸಂಗೀತ ನಿರ್ದೇಶಕ ಕೋಟಿ ಅವರ ಪುತ್ರ ರಾಜೀವ್‌ಸಲೂರಿ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ.

11:11 ಅವರ ಹೊಸ ಚಿತ್ರ. ಟೈಗರ್‌ ಹಿಲ್ಸ್‌ ಮತ್ತು ಸ್ವಸ್ತಿಕಾ ಫಿಲ್ಮ್ಸ್‌ ಬ್ಯಾನರ್‌ ಅಡಿ ಗಾಜುಲ ವೀರೇಶ್‌ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ಅವರ ಜೊತೆ ಗಾಳಿ ಸಂದೀಪ್‌ ಕೈಜೋಡಿಸಿದ್ದಾರೆ.

ಮೆಗಾಸ್ಟಾರ್‌ ಚಿರಂಜೀವಿ ಅವರು ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡಿದರು. 

ಫಸ್ಟ್‌ಲುಕ್‌ ಬಗ್ಗೆ ಮಾತನಾಡಿದ ಚಿರಂಜೀವಿ, ‘ನಾಯಕ ಸ್ಟೈಲಿಶ್ ಆಗಿ ಸೂಟ್‌ಕೇಸ್‌ನ್ನು ಹಿಡಿದುಕೊಂಡಿರುವ ಫಸ್ಟ್ ಲುಕ್ ನೋಡಿದರೆ, ವಿನೂತನ ಕತೆ ಹಾಗೂ ತಾಂತ್ರಿಕ ಗುಣಮಟ್ಟ ತೋರಿಸಿದೆ’ ಎಂದು ಹೇಳಿದರು.

ಚಿತ್ರ ಪ್ಯಾನ್‌ ಇಂಡಿಯಾ ಆಗಿ ಮೂಡಿಬರಲಿದೆ. ವರ್ಷಾ ವಿಶ್ವನಾಥ್‌ ನಾಯಕಿ. ಸದನ್, ಲಾವಣ್ಯ, ರಾಜ ರವೀಂದ್ರ, ರಾಜಶ್ರೀ ತಾರಾಗಣದಲ್ಲಿದ್ದಾರೆ. ಮಲೋಡಿ ಕಿಂಗ್ ಮಣಿಶರ್ಮ ಸಂಗೀತವಿದೆ. ಈಶ್ವರ್ ಅವರ ಛಾಯಾಗ್ರಹಣ, ರವಿಮನ್ಲ ಸಂಕಲನ, ಸಂಭಾಷಣೆ ಪವನ್‌ ಕೆ.ಅಚಲ ಅವರದ್ದು. ತ್ವರಿತವಾಗಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು