ಗುರುವಾರ , ಜನವರಿ 28, 2021
15 °C

54ನೇ ವಯಸ್ಸಿಗೆ ಕಾಲಿರಿಸಿದ ಸಂಗೀತ ಮಾಂತ್ರಿಕ ಎಆರ್ ರೆಹಮಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖ್ಯಾತ ಸಂಗೀತ ನಿರ್ದೇಶಕ, ಗಾಯಕ, ಗ್ರ್ಯಾಮಿ ಹಾಗೂ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಎಆರ್‌ ರೆಹಮಾನ್‌ ಇಂದು 54ನೇ ವಯಸ್ಸಿಗೆ ಕಾಲಿರಿಸಿದ್ದಾರೆ. ಈ ಸಂಗೀತ ಮಾಂತ್ರಿಕನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇದರೊಂದಿಗೆ ಅಭಿಮಾನಿಗಳು ಟ್ವಿಟರ್‌ನಲ್ಲಿ #ಹ್ಯಾಪಿ ಬರ್ತ್‌ಡೇ ಎಆರ್‌ರೆಹಮಾನ್‌ ಎಂಬ ಹ್ಯಾಷ್‌ಟ್ಯಾಗ್ ಕೂಡ ಕ್ರಿಯೆಟ್‌ ಮಾಡಿದ್ದು ಅದು ಟ್ರೆಂಡ್ ಆಗಿದೆ.

ಕಳೆದ ಹಲವು ವರ್ಷಗಳಿಂದ ಹಾಲಿವುಡ್‌, ಬಾಲಿವುಡ್‌ ಸೇರಿದಂತೆ ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಸಂಗೀತದ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ್ದರು. ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ರೆಹಮಾನ್ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ  ಭಾರತೀಯ ಸಂಗೀತ ದಿಗ್ಗಜರ ಪೈಕಿ ಮುಂಚೂಣಿಯಲ್ಲಿದ್ದಾರೆ.

ಕಾಮನ್ ಡಿಪಿ

ರೆಹಮಾನ್ ಅಭಿಮಾನಿಗಳು ತಮ್ಮ ನೆಚ್ಚಿನ ಸಂಗೀತಗಾರನ ಹುಟ್ಟುಹಬ್ಬಕ್ಕೆಂದು ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದು ಇಂದು ಹಲವರ ವ್ಯಾಟ್‌ಆ್ಯಪ್‌ನ ಕಾಮನ್ ಡಿಪಿ(ಡಿಸ್‌ಪ್ಲೇ ಪಿಕ್ಟರ್‌) ಆಗಿದೆ.

ಸದ್ಯ ಅನೇಕ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇರುವ ರೆಹಮಾನ್ ಇತ್ತೀಚೆಗೆ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಅಲ್ಲದೇ ಕಳೆದೆರಡು ದಿನಗಳ ಹಿಂದೆ ಚೆನ್ನೈನ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿರುವ ಫೋಟೊ ಹಂಚಿಕೊಂಡು ಇನ್ನೂ ಕೆಲವು ದಿನ ಇಲ್ಲೇ ಇರುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

 

#HBDARRahman #HBDARR54#HappyBirthdayARRahman

Advance B'day (tomo Jan 6) wishes to the legendary Isai Puyal @arrahman sir 🙂🙏 pic.twitter.com/4ufQKjooSC

 

Very happy to release the Common DP of Isai Puyal @arrahman on occasion of his 54th birthday! Thank you for all the lovely music & moments you keep giving us... ♥️#Ayalaan#HBDARR54#HBDARRahman#HappyBirthdayARRahman@RahmaniacIndia@MaduraiRahmania@SenthilNathanKs pic.twitter.com/GhOrDzHs8n

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು