ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ವಿಶ್ವವಿದ್ಯಾಲಯ: ಚಲನಚಿತ್ರ ನಿರ್ದೇಶನ, ಎಡಿಟಿಂಗ್ ಕೋರ್ಸ್‌

ಸಂಗೀತ ವಿಶ್ವವಿದ್ಯಾಲಯದಲ್ಲಿ ನಡೆದ ತಜ್ಞರ ಸಭೆಯಲ್ಲಿ ನಿರ್ಣಯ
Published 13 ಸೆಪ್ಟೆಂಬರ್ 2023, 15:39 IST
Last Updated 13 ಸೆಪ್ಟೆಂಬರ್ 2023, 15:39 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ನಿರ್ದೇಶನ, ಎಡಿಟಿಂಗ್, ಮಾಧ್ಯಮ ಜಾಹೀರಾತು, ಚಿತ್ರಕಥೆ ರಚನೆಗೆ ಸಂಬಂಧಿಸಿದಂತೆ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಯಿತು.

2023–24ನೇ ಸಾಲಿನಲ್ಲಿ ಹೊಸ ನಿಕಾಯಗಳಡಿ ವಿಭಾಗಗಳನ್ನು ಪ್ರಾರಂಭಿಸಲು ಹಾಗೂ ಅಲ್ಪಾವಧಿ ಸರ್ಟಿಫಿಕೇಟ್ ಕೋರ್ಸ್‌ಗಳ ಪಠ್ಯ ರಚನೆ ಕುರಿತು ಬುಧವಾರ ನಡೆದ ತಜ್ಞರ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

‘ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಕೋರ್ಸ್‌ಗಳಲ್ಲಿ ಸಂಯೋಜಿತ ಬೋಧನಾ ವಿಧಾನದಲ್ಲಿ (ಬ್ಲೆಂಡೆಡ್ ಮೋಡ್) ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಶ್ರೇಷ್ಠ ಗಾಯಕರ ಗಾಯನ, ಸಂಗೀತ ತರಗತಿಗಳನ್ನು ಸಂಗ್ರಹಿಸಿ ಪಠ್ಯಕ್ಕೆ ಅನುಗುಣವಾಗಿ ವರ್ಗೀಕರಿಸಿ ‘ಮೂಕ್‌ ಕೋರ್ಸ್‌’ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ’ ಎಂದು ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ ತಿಳಿಸಿದರು.

‘ಎಲ್ಲ ವಿಭಾಗಗಳಿಗೂ ಸಂದರ್ಶಕ ಪ್ರಾಧ್ಯಾಪಕರನ್ನು (ಪ್ರೊಫೆಸರ್‌ ಆಫ್ ‍ಪ್ರಾಕ್ಟೀಸ್) ನೇಮಕ ಮಾಡಲಾಗುವುದು. ಸಂಗೀತ ಮತ್ತು ಪ್ರದರ್ಶಕ ಕಲೆಗಳಿಗೆ ಸಂಬಂಧಿಸಿದಂತೆ ಎಲ್ಲ ಉಪನ್ಯಾಸ, ಪ್ರದರ್ಶನಗಳನ್ನು ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗುವುದು. ಇದಕ್ಕೆ ಸಭೆ ಅನುಮತಿ ನೀಡಿದೆ’ ಎಂದರು.

‘ವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳೂ ಐಸಿಎಸ್‌ಆರ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ವಿಶ್ವವಿದ್ಯಾಲಯದು ಆ ಸಂಸ್ಥೆಯೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅಗತ್ಯಕ್ಕೆ ತಕ್ಕಂತೆ ಉಪ ಸಮಿತಿಗಳನ್ನು ರಚಿಸಿ, ವಿಷಯವಾರು ಪಠ್ಯಗಳನ್ನು ಸಿದ್ಧಪಡಿಸಲು ಸಭೆಯು ಕುಲಪತಿಗೆ ಅಧಿಕಾರ ನೀಡಿದೆ. ಇದೇ ತಿಂಗಳ ಕೊನೆಯಲ್ಲಿ ಮತ್ತೊಂದು ಸಭೆ ನಡೆಸಿ, ಈ ಶೈಕ್ಷಣಿಕ ವರ್ಷದ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಲು ಸಭೆಯು ತೀರ್ಮಾನಿಸಿತು’ ಎಂದು ವಿವರ ನೀಡಿದರು.

ಸಮಿತಿಯ ವಿಶೇಷ ಆಹ್ವಾನಿತರಾದ ಚಲನಚಿತ್ರ ನಿರ್ದೇಶಕ ಹಂಸಲೇಖ, ಲಕ್ಷ್ಮಿನಾರಾಯಣ ಗ್ಲೋಬಲ್‌ ಸಂಗೀತ ಅಕಾಡೆಮಿಯ ನಿರ್ದೇಶಕ ಎಲ್. ಸುಬ್ರಹ್ಮಣ್ಯಂ, ನಿವೃತ್ತ ಕುಲಪತಿ ಹಿ.ಚಿ. ಬೋರಲಿಂಗಯ್ಯ ಮತ್ತು ಸದಸ್ಯರಾದ ಪ್ರೊ.ಬಾಲಸುಬ್ರಹ್ಮಣ್ಯಂ, ಬಿ. ಸುರೇಶ್, ಪ್ರೊ.ವೈ.ಕೆ. ನಾರಾಯಣಸ್ವಾಮಿ, ಪ್ರೊ.ಸಿ.ಎ. ಶ್ರೀಧರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT