ಶನಿವಾರ, ಏಪ್ರಿಲ್ 1, 2023
25 °C

‘ನನ್ನ ತಮ್ಮ ಅಪರೂಪದ ಪ್ರತಿಭಾವಂತ’: ಸುಶಾಂತ್ ಸಹೋದರಿ ಶ್ವೇತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊಗಳನ್ನು ಹಂಚಿಕೊಂಡಿರುವ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ‘ನನ್ನ ತಮ್ಮ ಅಪರೂಪದ ಪ್ರತಿಭಾವಂತ’ ಎಂದು ಬರೆದುಕೊಂಡಿದ್ದಾರೆ.

ಶ್ವೇತಾ ಹಿಂದೊಮ್ಮೆ ತಮ್ಮನ ಕುರಿತಾದ ವಿಡಿಯೊಗಳನ್ನು ಹಂಚಿಕೊಂಡು ಭಾವುಕರಾಗಿ ಬರೆದುಕೊಂಡಿದ್ದರು. ಈಗ ಮತ್ತೊಮ್ಮೆ ಸುಶಾಂತ್‌ಗೆ ಸಂಬಂಧಿಸಿದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಳೆಯೊಂದರ ಮೇಲೆ ಎರಡೂ ಕೈಯಿಂದ ಬರೆಯುತ್ತಿರುವ ವಿಡಿಯೊ ಹಂಚಿಕೊಂಡು ‘ಅಪರೂಪದ ಪ್ರತಿಭಾವಂತ’ ಎಂಬ ಅಡಿಬರಹ ಬರೆದುಕೊಂಡಿದ್ದಾರೆ.

ಸುಶಾಂತ್‌ ಒಂದೇ ಸಮಯಕ್ಕೆ ಎರಡೂ ಕೈಯಿಂದ ಬರೆಯುವ ಸಾಮರ್ಥ್ಯ ಹೊಂದಿದ್ದರು. ಅವರು ಬಿಳಿ ಹಾಳೆಯೊಂದರ ಮೇಲೆ ’ಯಾವುದು ಅಸಾಧ್ಯವಲ್ಲ’ ಎಂದು ಬಲಗಡೆ ಹಾಗೂ ಎಡಗಡೆ ಎರಡೂ ಕಡೆಯಿಂದ ಬರೆಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ ಶ್ವೇತಾ.

‘ಕನ್ನಡಿ ಬರಹ – ಇದನ್ನು ಪ್ರಪಂಚದಲ್ಲಿ ಕೇವಲ ಶೇ 1 ರಷ್ಟು ಮಂದಿ ಅಷ್ಟೇ ಮಾಡಲು ಸಾಧ್ಯ. #ನನ್ನ ಸಹೋದರ ದಿ ಬೆಸ್ಟ್‌# ಜಸ್ಟಿಸ್ ಫಾರ್ ಸುಶಾಂತ್ ಸಿಂಗ್‌ರಜಪೂತ್‌#ಗ್ಲೋಬಲ್‌ಪ್ರೇಯರ್ಸ್‌ಫಾರ್‌ಎಸ್‌ಎಸ್‌ಆರ್‌ ಎಂದು ಅಡಿಬರಹವನ್ನು ಹಾಕಿಕೊಂಡಿದ್ದಾರೆ.

ಇನ್ನೊಂದು ವಿಡಿಯೊದಲ್ಲಿ ಸುಶಾಂತ್ ಶಾಲಾ ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವುದು ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಿರುವ ವಿಡಿಯೊ ಹಂಚಿಕೊಂಡಿರುವ ಶ್ವೇತಾ ’ಇದು ನನ್ನ ತಮ್ಮ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು