ಮಂಗಳವಾರ, ಅಕ್ಟೋಬರ್ 26, 2021
20 °C

ನನ್ನ ಆ ಟ್ವೀಟ್ ಸಮಂತಾಳಿಗೆ ಸಂಬಂಧಿಸಿದ್ದಲ್ಲ, ನಾನೇನು ಮಾಡಲಿ ಎಂದ ನಟ ಸಿದ್ಧಾರ್ಥ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು; ನಟ ನಾಗ ಚೈತನ್ಯ ಹಾಗೂ ಸಮಂತಾ ದಾಂಪತ್ಯ ಇತ್ತೀಚೆಗೆ ಅಧಿಕೃತವಾಗಿ ಮುರಿದು ಬಿದ್ದಿತ್ತು. ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ನಟ ಸಿದ್ಧಾರ್ಥ 'ಮೋಸಗಾರರು ಯಾವತ್ತು ಉದ್ದಾರ ಆಗೋಲ್ಲ ಎಂಬುದನ್ನು ನನಗೆ ನನ್ನ ಶಿಕ್ಷಕರು ಕಲಿಸಿದ ಮೊದಲ ಪಾಠ, ನಿಮ್ಮ ಅನುಭವ ಏನು’ ಎಂದು ತಮ್ಮ ಫಾಲೋವರ್ಸ್‌ಗಳನ್ನು ಕೇಳಿದ್ದರು.

ಈ ಟ್ವೀಟ್ ವೈರಲ್ ಆದ ಕೂಡಲೇ ಸಿದ್ಧಾರ್ಥ ಅವರು ಸಮಂತಾ ಉದ್ದೇಶಿಸಿಯೇ ಈ ಮಾತು ಹೇಳಿರುವುದು ಎಂದು ನೆಟ್ಟಿಗರು ಲಿಂಕ್ ಮಾಡಿದ್ದರು. ಸಮಂತಾಳನ್ನು ಮೋಸಗಾತಿ ಎಂದು ಸಿದ್ದಾರ್ಥ ಕರೆದಿದ್ದಾರೆ ಎಂದು ವ್ಯಾಪಕ ಚರ್ಚೆಯಾಯಿತು.

ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿರುವ ಸಿದ್ಧಾರ್ಥ, ‘ಮೋಸಗಾರರು ಎಂಬ ಟ್ವೀಟ್‌ನಲ್ಲಿ ನನ್ನ ಜೀವನದ ಬಗ್ಗೆ ನಾನು ಮಾತನಾಡಿದ್ದೇನೆ. ಯಾರೋ ಅದನ್ನು ಬೇರೆಯವರಿಗೆ ಲಿಂಕ್ ಮಾಡಿದರೆ ಅದು ಅವರ ಸಮಸ್ಯೆ, ನಾನೇನು ಮಾಡಲಿ’ ಎಂದು ಹೇಳಿ ಆ ಟ್ವೀಟ್‌ಗೂ ಸಮಂತಾಗೂ ಸಬಂಧವಿಲ್ಲ ಎಂದು ಹೇಳಿದ್ದಾರೆ.

‘ನನ್ನ ಮನೆ ಮುಂದೆ ನಾಯಿಗಳು ಬೊಗಳಿದರೆ, ಯಾರಾದರೂ ಬಂದು ನನಗೆ ನೀವು ನಾಯಿ ಎಂದಿದ್ದಿರಾ ಎಂದರೆ ನಾನೇನು‌ ಮಾಡಬೇಕು?’ ಎಂದು ಪ್ರಶ್ನಿಸಿರುವ ಅವರು, ’ನಾನು 12 ವರ್ಷಗಳಿಂದ ಟ್ವೀಟ್ ಮಾಡುತ್ತಿದ್ದೇನೆ. ಅದು ನನಗೆ ಮಾತ್ರ ಸಂಬಂಧಿಸಿರುತ್ತೆ.‌ ನಾನು ಏನೇ‌ ಹೇಳುವುದಿದ್ದರೂ ನೇರವಾಗಿ ಹೇಳುತ್ತೇನೆ’ ಎಂದು ಹೇಳಿದ್ದಾರೆ.

 

ಕಳೆದ ಅ 3 ರಂದು ತೆಲುಗು ನಟ ನಾಗ ಚೈತನ್ಯ ಹಾಗೂ ಸಮಂತಾ ಬೇರೆ ಬೇರೆಯಾಗಿದ್ದರ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು.

ನಾಗ ಚೈತನ್ಯ ಜತೆಗಿನ ಮದುವೆ ಮುರಿದ ಬಳಿಕ ನಟಿ ಸಮಂತಾ ರುತ್ ಪ್ರಭು ತಮ್ಮ ಮೇಲಿನ ಆರೋಪ, ವದಂತಿಗಳ ಬಗ್ಗೆ ಮೌನ ಮುರಿದಿದ್ದರು.

‘ನನಗೆ ಬೇರೆ ಸಂಬಂಧವಿತ್ತು, ಗರ್ಭಪಾತ ಮಾಡಿಸಿಕೊಂಡಿದ್ದೆ ಎಂದೆಲ್ಲ ವದಂತಿ ಹರಡಲಾಗಿತ್ತು. ಆದರೆ ಅವುಗಳೆಲ್ಲ ಸುಳ್ಳು,’ ಎಂದು ಅವರು ಸ್ಪಷ್ಟಪಡಿಸಿದ್ದರು.

ವಿಚ್ಛೇದನದ ಬಳಿಕ ಸಮಂತಾ, ತಮ್ಮ ಸಾಮಾಜಿಕ ತಾಣಗಳ ಹೆಸರನ್ನು ಬದಲಾಯಿಸಿಕೊಂಡಿದ್ದರು. ಹೆಸರಿನ ಕೊನೆಯಲ್ಲಿದ್ದ ಅಕ್ಕಿನೇನಿ ಪದವನ್ನು ತೆಗೆದುಹಾಕಿದ್ದರು.

ನಂತರದಲ್ಲಿ ಕೇಳಿಬಂದಿರುವ ವಿವಿಧ ರೀತಿಯ ವದಂತಿಗಳು, ಗಾಸಿಪ್ ಸುದ್ದಿಗಳಿಗೆ ಉತ್ತರ ನೀಡಿರುವ ನಟಿ ಸಮಂತಾ, ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರೀಸ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಸೈಯದ್ ನಿಜಾಮುದ್ದೀನ್ ಸತ್ಯಜಿತ್ ಆಗಿದ್ದು ಹೇಗೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು