ಸೋಮವಾರ, ಮಾರ್ಚ್ 27, 2023
32 °C

ನಾಗಚೈತನ್ಯ ಮುಂದಿನ ಚಿತ್ರ ‘ಥ್ಯಾಂಕ್ ಯು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಚೈತನ್ಯ ಹಾಗೂ ಸಾಯಿಪಲ್ಲವಿ ನಟನೆಯ ‘ಲವ್‌ಸ್ಟೋರಿ’ ಸಿನಿಮಾದ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿತ್ತು. ಶೂಟಿಂಗ್ ಮುಗಿದ ತಕ್ಷಣ ಚಿಕ್ಕ ವಿರಾಮದಲ್ಲಿ ಮಡದಿ ಸಮಂತಾ ಜೊತೆ ಮಾಲ್ಡೀವ್ಸ್‌ಗೆ ತೆರಳಿದ್ದರು ಚೈ. ಅಲ್ಲಿಂದ ಮರಳಿದ್ದ ಅವರು ಈಗ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಅದುವೇ ‘ಥ್ಯಾಂಕ್‌ ಯು’. ಮನಂ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ವಿಕ್ರಂ ಕೆ. ಕುಮಾರ್ ಈ ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ಮನರಂಜನೆ ಹಿನ್ನೆಲೆಯುಳ್ಳ ಈ ಚಿತ್ರವು ಹೈದರಾಬಾದ್‌ನಲ್ಲಿ ಸೆಟ್ಟೇರಿದೆ. ಬಿವಿಎಸ್‌ ರವಿ ಚಿತ್ರಕಥೆ ಬರೆದಿದ್ದು ಪಿಸಿ ಶ್ರೀರಾಮ್ ಸಿನಿಮಾಟೊಗ್ರಫಿ ಚಿತ್ರಕ್ಕಿದೆ. ತಮನ್ ಸಂಗೀತ ನಿರ್ದೇಶನ ಮಾಡುತ್ತಿದ್ದು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿ ದಿಲ್‌ರಾಜು ಹಣಹೂಡಿಕೆ ಮಾಡುತ್ತಿದ್ದಾರೆ.

ಈ ಬಗ್ಗೆ ಪಿಸಿ ಶ್ರೀರಾಮ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು ‘ನನ್ನ ಮುಂದಿನ ಪಯಣ ವಿಕ್ರಂ ಕೆ. ಕುಮಾರ್ ಅವರೊಂದಿಗೆ. ಥ್ಯಾಂಕ್‌ ಯು ಸಿನಿಮಾ ಇಂದಿನ ಆರಂಭವಾಗಲಿದೆ. ಇದರಲ್ಲಿ ದೊಡ್ಡ ತಾರಾಗಣವೇ ಇದೆ. ಈ ಬಹುನಿರೀಕ್ಷಿತ ಸಿನಿಮಾವನ್ನು ದಿಲ್‌ರಾಜು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಕುರಿತು ಹೆಚ್ಚಿನ ಮಾಹಿತಿ ಸದ್ಯದಲ್ಲಿ ಪ್ರಕಟಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು