ಭಾನುವಾರ, ಆಗಸ್ಟ್ 1, 2021
27 °C

ಆ್ಯಕ್ಷನ್‌ ಚಿತ್ರದೆಡೆಗೆ ನಾಗಾರ್ಜುನ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಯಸ್ಸು ಅರವತ್ತಾದರೂ ಆತ ಟಾಲಿವುಡ್‌ನ ಈಗಿನ ಯಾವ ಯುವ ನಾಯಕರಿಗೂ ಕಡಿಮೆ ಇಲ್ಲ. ರೊಮ್ಯಾಂಟಿಕ್‌ ಸಿನಿಮಾಗಳಿಂದಲೇ ಹೆಚ್ಚು ಖ್ಯಾತಿ ಪಡೆದಿರುವ ಈ ನಟ ಅಕ್ಕಿನೇನಿ ನಾಗಾರ್ಜುನ. ಹ್ಯಾಂಡ್‌ಸಮ್ ನೋಟ, ಸದಾ ಕಾಂತಿ ಸೂಸುವ ಮುಖ ಇವರಿಗೆ ಪ್ಲಸ್‌ ಪಾಯಿಂಟ್‌. ವಯಸ್ಸು ಅರವತ್ತಾದರೂ 30ರ ಯುವಕನಂತೆ ಕಾಣಿಸುವ ಇವರು ಈ ವಯಸ್ಸಿನಲ್ಲೂ ರೊಮ್ಯಾಂಟಿಕ್ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದರು. 60ರ ವಯಸ್ಸಿನಲ್ಲೂ ದೇಹವನ್ನು ಫಿಟ್‌ ಆಗಿರಿಸಿಕೊಂಡ ಭಾರತ ಸಿನಿರಂಗದ ಕೆಲವೇ ನಾಯಕರಲ್ಲಿ ನಾಗಾರ್ಜುನ ಕೂಡ ಒಬ್ಬರು. 

ಇಂತಿಪ್ಪ ನಾಗಾರ್ಜುನ ಈಗ ಆ್ಯಕ್ಷನ್ ಸಿನಿಮಾಗಳತ್ತ ಮನಸ್ಸು ವಾಲಿಸುತ್ತಿದ್ದಾರೆ. ಆದರೆ ಅದಕ್ಕೆ ಕಾರಣ ಎನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಅವರ ಬಹು ನಿರೀಕ್ಷಿತ ‘ಮನ್ಮತುಡು 2’ ಸಿನಿಮಾದ ಸೋಲು ಈ ನಿರ್ಧಾರದ ಹಿಂದಿನ ಕಾರಣವಾಗಿರಬಹುದು ಎನ್ನುತ್ತಿದೆ ಟಾಲಿವುಡ್‌. 

ಸದ್ಯಕ್ಕೆ ನಾಗಾರ್ಜುನ ನಟನೆಯ ‘ವೈಲ್ಡ್ ಡಾಗ್‌’ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ ಸೆಟ್ಟೆರಿದೆ. ಈ ಸಿನಿಮಾವನ್ನು ನಿರ್ಮಾಪಕ ಸೋಲೊಮನ್‌ ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲಿ ನಾಗಾರ್ಜುನ ಎನ್‌ಐಎ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅಲ್ಲದೇ ಪ್ರವೀಣ್ ಸತ್ತಾರು ನಿರ್ದೇಶನದ ಸಿನಿಮಾವೊಂದಕ್ಕೂ ಸಹಿ ಹಾಕಿದ್ದು ಅದರಲ್ಲಿ ಮುಖ್ಯ ಸುರಕ್ಷತಾ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವೂ ಸಂಪೂರ್ಣ ಆ್ಯಕ್ಷನ್ ಸಿನಿಮಾವಾಗಿದೆ. ಪ್ರವೀಣ್ ಈ ಹಿಂದೆ ‘ಪಿಎಸ್‌ವಿ ಗರುಡ ವೇಗ’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರವು ಮುಂದಿನ ವರ್ಷ ಸೆಟ್ಟೆರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು