ಸೋಮವಾರ, ಅಕ್ಟೋಬರ್ 18, 2021
23 °C

ಬಂದಿದೆ ‘ನಮೋ ಗಾಂಧಿ’ ಕಿರುಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶ 75ನೇ ಸ್ವಾತಂತ್ರ್ಯೋತ್ಸವದಲ್ಲಿರುವ ಸಂದರ್ಭದಲ್ಲಿ ಗಾಂಧೀಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಕಿರುಚಿತ್ರ ‘ನಮೋ ಗಾಂಧಿ’ ಬಿಡುಗಡೆಯಾಗಿದೆ.

ರಂಗಭೂಮಿಯಲ್ಲಿ ಸಕ್ರಿಯರಾಗಿರುವ, ಟಿವಿ ರಿಯಾಲಿಟಿ ಷೋಗಳ ನಿರ್ಮಾಪಕ ಎಸ್.ಎಲ್.ಎನ್ ಸ್ವಾಮಿ ನಿರ್ದೇಶನದ ಚಿತ್ರವಿದು. 24 ಗಂಟೆಗಳಲ್ಲಿ ನಿರ್ಮಾಣವಾಗಿದೆ ಎಂಬುದು ಚಿತ್ರದ ಹೆಗ್ಗಳಿಕೆ.

ಗಾಂಧೀಜಿಯವರ ತತ್ವಗಳಿಂದ ಪ್ರೇರೇಪಿತಳಾದ ಬಾಲಕಿಯೊಬ್ಬಳು, ತಾನು ಕಂಡ ಅನ್ಯಾಯ, ಅಕ್ರಮಗಳನ್ನು ಗಾಂಧಿ ಪಾತ್ರದ ಪ್ರಭಾವದ ಹಿನ್ನೆಲೆಯಲ್ಲಿ ಹೇಗೆ ಬದಲಿಸುತ್ತಾಳೆ ಎಂಬುದೇ ಕಿರುಚಿತ್ರದ ಕಥಾವಸ್ತು.

ಪುಟಾಣಿ ಪ್ರತಿಭೆ ಸಾಕ್ಷಿ, ಶ್ವೇತ ಶ್ರೀನಿವಾಸ್, ಟೈಗರ್ ಗಂಗ, ಸಿಂಹಾದ್ರಿ ಇದರಲ್ಲಿ ನಟಿಸಿದ್ದಾರೆ.
ಟ್ರಯೋ ಅಪರೇಲ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶೇಷಶಯನಂ ಈ ಕಿರುಚಿತ್ರದ ನಿರ್ಮಾಪಕರು. ರಮೇಶ್ಚಂದ್ರ ಹಾಗೂ ಸುರೇಖ ಹೆಗ್ಡೆ ಅವರ ಗಾಯನವಿದೆ.

ಗಾಂಧೀಜಿ ಅವರನ್ನು ಅರ್ಥ ಮಾಡಿಕೊಳ್ಳುವುದು ಮೇಲ್ನೋಟಕ್ಕೆ ಸುಲಭ. ಆದರೆ ಹತ್ತಿರ ಹತ್ತಿರ ಹೋಗುತ್ತಿದಂತೆ ಅವರ ಬಗ್ಗೆ ತಿಳಿಸುಕೊಳ್ಳುವುದು ಅಷ್ಟೇ ಜಟಿಲ. ಅರ್ಥ ಮಾಡಿಕೊಂಡರೆ ಸುಲಭ. ಗಾಂಧಿ ತತ್ವಗಳಿಂದ ಸಮಾಜದ ಅನ್ಯಾಯಗಳನ್ನು ಸರಿ ಪಡಿಸುವ ಕಿರುಪಯತ್ನವನ್ನು ಈ ಕಿರುಚಿತ್ರದ ಮೂಲಕ ಹೇಳ ಹೊರಟಿದ್ದೇನೆ ಎಂದರು ಎಸ್.ಎಲ್.ಎನ್. ಸ್ವಾಮಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು