ಸೋಮವಾರ, ಜೂನ್ 14, 2021
28 °C

ಸೆಪ್ಟೆಂಬರ್ 5ಕ್ಕೆ ನಾನಿಯ ‘ವಿ’ ಸಿನಿಮಾ ಪ್ರೈಮ್‌ನಲ್ಲಿ ಬಿಡುಗಡೆ

ಪ್ರಜಾವಾಣಿ ಫೀಚರ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ ನ್ಯಾಚುರಲ್‌ ಸ್ಟಾರ್ ನಾನಿ ಅಭಿಯನದ ‘ವಿ’ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿ ಸೆಪ್ಟೆಂಬರ್‌ 5 ರಂದು ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಅಧೀಕೃತ ಮಾಹಿತಿಯನ್ನು ಹೊರ ಹಾಕಿದೆ.

‌ಮೋಹನ್ ಕೃಷ್ಣ ಇಂದ್ರಗಂಟಿ ನಿರ್ದೇಶನದ ಸಿನಿಮಾದಲ್ಲಿ ನಿವೇತಾ ಥಾಮಸ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸುಧೀರ್ ಬಾಬು, ಅದಿತಿ ರಾವ್ ಹೈದರಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಸಿನಿಮಾ ಬಿಡುಗಡೆಯ ಕುರಿತು ಸಣ್ಣ ವಿಡಿಯೊವೊಂದನ್ನು ಬಿಡುಗಡೆ ಮಾಡಿತ್ತು ಚಿತ್ರತಂಡ. ಅಲ್ಲದೇ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಕುರಿತು ಸುಳಿವು ನೀಡಿತ್ತು. ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ದೊಡ್ಡ ಬಜೆಟ್‌ನ ಟಾಲಿವುಡ್‌ನ ಮೊದಲು ಸಿನಿಮಾ ‘ವಿ’.

ಆಗಸ್ಟ್‌ನಲ್ಲಿ ಸಿನಿಮಾ ಥಿಯೇಟರ್‌ಗಳು ಪುನಾರಾರಂಭಗೊಳ್ಳುವ ಭರವಸೆ ಇದ್ದ ಕಾರಣ 3 ಕೋಟಿಗೂ ಕಡಿಮೆ ಬಜೆಟ್ ಇರುವ ಚಿತ್ರಗಳಷ್ಟೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಂಡಿದ್ದವು. ಆದರೆ ಸದ್ಯಕ್ಕೆ ಥಿಯೇಟರ್‌ಗಳು ಆರಂಭವಾಗುವ ಲಕ್ಷಣ ಇಲ್ಲದ ಕಾರಣ ಯಶಸ್ವಿ ನಿರ್ಮಾಪಕ ದಿಲ್‌ ರಾಜು ‘ವಿ’ ಸಿನಿಮಾವನ್ನು ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆ ಮಾಡುವ ಯೋಚನೆ ಮಾಡಿದ್ದಾರೆ.

ಇದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು ನಾನಿಯ ಅಭಿನಯದ ಇಪ್ಪತ್ತೈದನೇ ಚಿತ್ರವಾಗಿದೆ. ನಾನಿಯ ಮೊದಲ ಸಿನಿಮಾವೂ ಸೆಪ್ಟೆಂಬರ್ 5 ರಂದೇ ಬಿಡುಗಡೆಯಾಗಿದ್ದು ಮೊದಲ ಒಟಿಟಿ ಸಿನಿಮಾವೂ ಅದೇ ತಾರೀಖಿನಂದು ಬಿಡುಗಡೆಯಾಗುತ್ತಿರುವುದು ವಿಶೇಷ.

₹25 ಕೋಟಿ ಬಜೆಟ್‌ನ ಈ ಸಿನಿಮಾಕ್ಕೆ ದಿಲ್‌ ರಾಜು ಹಣ ಹೂಡಿಕೆ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು