ವಿಕ್ಟರಿ ವೆಂಕಟೇಶ್‌ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ತೆಲುಗಿನ‘ನಾರಪ್ಪ’ ಸಿನಿಮಾದ ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ಸಿನಿಮಾ ಜುಲೈ 20ರಂದು ಬಿಡುಗಡೆಯಾಗಲಿದೆ.
ಟ್ರೈಲರ್‌ನಲ್ಲಿನ ‘ನಾರಪ್ಪ‘ನ ಅಬ್ಬರಕ್ಕೆ ವಿಕ್ಟರಿ ವೆಂಕಟೇಶ್ ಅಭಿಮಾನಿಗಳು ಫಿದಾ ಆಗಿದ್ದಾರೆ.ಇದೇ 20ರಂದು ಭಾರತ ಸೇರಿದಂತೆ 240 ದೇಶಗಳಲ್ಲಿ ನಾರಪ್ಪ ಚಿತ್ರ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ.
ತಮಿಳು ಬಾಕ್ಸ್ ಆಫೀಸ್ ಕೊಳ್ಳೆಹೊಡೆದ ಧನುಷ್ ಮತ್ತು ಮಂಜು ವಾರಿಯರ್ ಜೋಡಿಯಾಗಿ ನಟಿಸಿದ್ದ 'ಅಸುರನ್' ಸಿನಿಮಾದ ತೆಲುಗು ರಿಮೇಕ್ ಇದಾಗಿದೆ. ವೆಂಕಟೇಶ್ ಜೊತೆ ಪ್ರಿಯಾಮಣಿ ನಟಿಸಿದ್ದಾರೆ. ಈ ಸಿನಿಮಾವನ್ನು ಶ್ರೀಕಾಂತ್ ಅಡ್ಡಲಿ ನಿರ್ದೇಶನ ಮಾಡಿದ್ದಾರೆ.
ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ವೆಂಕಟೇಶ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
‘ಅಸುರನ್’ ಸಿನಿಮಾ ಪೂಮಣಿ ಅವರ ‘ವೆಕ್ಕೈ’ ಕಾದಂಬರಿ ಆಧಾರಿತವಾದದ್ದು. 1980ರ ದಶಕದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಜಾತಿ ಪದ್ಧತಿ ಹಾಗೂ ರಾಜಕೀಯವನ್ನು ಪ್ರಧಾನವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.