ಸೋಮವಾರ, ಆಗಸ್ಟ್ 26, 2019
21 °C

ನಾರಾಯಣಮೂರ್ತಿ, ಸುಧಾ ಬಯೋಪಿಕ್ ತೆರೆಗೆ

Published:
Updated:

ಇನ್ಫೊಸಿಸ್ ಸಹ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿ ಅವರ ಜೀವನವನ್ನು ಆಧರಿಸಿದ ಚಿತ್ರವನ್ನು ಅಶ್ವಿನಿ ಅಯ್ಯರ್‌ ತಿವಾರಿ ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯ ಅಶ್ವಿನಿ, ಕಂಗನಾ ರನೋಟ್‌ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿರುವ ‘ಪಂಗಾ’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಚಿತ್ರವು ಮುಂದಿನ ವರ್ಷ ಸೆಟ್ಟೇರಲಿದೆ.

ಈ ಚಿತ್ರಕ್ಕೆ ನಾರಾಯಣ ಮೂರ್ತಿ ಅವರಿಂದ ಈಗಾಗಲೇ ಅನುಮತಿ ಪಡೆಯಲಾಗಿದೆ. ಈ ವರ್ಷದ ಆರಂಭದಲ್ಲಿ ಅವರ ಜೊತೆ ಚಿತ್ರದ ಬಗ್ಗೆ ಚರ್ಚೆ ನಡೆಸಲಾಗಿತ್ತು. ಅವರ ಅನುಮತಿ ನಂತರವೇ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಯಿತು ಎಂದು ಚಿತ್ರತಂಡ ಹೇಳಿದೆ.

ಚಿತ್ರಕ್ಕೆ ಸಂಜಯ್‌ ತ್ರಿಪಾಠಿ, ನಿತೇಶ್‌ ತಿವಾರಿ, ಅಶ್ವಿನಿ ಅಯ್ಯರ್‌ ತಿವಾರಿ, ಮಹಾವೀರ್‌ ಜೈನ್‌ ಬಂಡವಾಳ ಹೂಡಿದ್ದಾರೆ.

ತಂಡವು ಸದ್ಯದಲ್ಲೇ ಚಿತ್ರಕತೆಯ ಕೆಲಸವನ್ನು ಆರಂಭಿಸಲಿದೆ. ಈ ಸಿನಿಮಾದಲ್ಲಿ ಮೂರ್ತಿಯವರ ಸ್ಪೂರ್ತಿದಾಯಕ ಜೀವನ, ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆ ಹಾಗೂ ‘ಐಟಿ ದಂಪತಿ’ ಎಂದೇ ಖ್ಯಾತರಾಗಿರುವ ನಾರಾಯಣಮೂರ್ತಿ– ಸುಧಾಮೂರ್ತಿ ಅವರ ಜೀವನ ಕುರಿತು ಕತೆ ಇದರಲ್ಲಿದೆ. ಈ ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎಂಬ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. 

Post Comments (+)