ಈ ಹಿಂದೆ ‘ಫೋರ್ ವಾಲ್ಸ್’ ಎಂಬ ಸಿನಿಮಾ ನಿರ್ದೇಶಿಸಿದ್ದ ಎಸ್.ಎಸ್.ಸಜ್ಜನ್ ‘ಶುಭಕೃತ್ ನಾಮ ಸಂವತ್ಸರ’ ಎಂಬ ಸಿನಿಮಾ ನಿರ್ದೇಶಿಸುತ್ತಿದ್ದು, ತೆಲುಗು ನಟ ನರೇಶ್ ವಿಜಯಕೃಷ್ಣ ತಂಡ ಸೇರಿಕೊಂಡಿದ್ದಾರೆ.

ಸಿನಿಮಾದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ‘ಸಿದ್ದೇಗೌಡ್ರು’ ಪಾತ್ರದ ಮೂಲಕ ಗುರುತಿಸಿಕೊಂಡಿರುವ ನಟ ಧನಂಜಯ್ ನಾಯಕನಾಗಿ ನಟಿಸುತ್ತಿದ್ದಾರೆ. ನರೇಶ್ ಈ ಸಿನಿಮಾದಲ್ಲಿ ಕುಡುಕನ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಜನ್ಮದಿನದ ಸಂದರ್ಭದಲ್ಲಿ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಿದೆ ಚಿತ್ರತಂಡ. ಸದ್ಯ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆಸುತ್ತಿದೆ.

ಶೀರ್ಷಿಕೆಯೇ ಹೇಳುವಂತೆ ಇದೊಂದು ಹಬ್ಬದ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದ್ದು, ಅದಕ್ಕೆ ಕ್ರೈಂ ಥ್ರಿಲ್ಲರ್ ಸ್ಪರ್ಶ ನೀಡಿದ್ದಾರೆ ಸಜ್ಜನ್. ಎಸ್.ವಿ ಪಿಕ್ಚರ್ಸ್ ಬ್ಯಾನರ್ನಲ್ಲಿ ‘ಶುಭಕೃತ್ ನಾಮ ಸಂವತ್ಸರ’ ತೆರೆಗೆ ಬರಲಿದೆ. ತೆಲುಗಿನ ‘ರುದ್ರಮದೇವಿ’, ‘ಗರುಡವೇಗ’ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿರುವ ದೇವೇಂದ್ರ ವಡ್ಡೆ ಛಾಯಾಚಿತ್ರಗ್ರಹಣ, ಸುಧಾ ಶ್ರೀನಿವಾಸ್ ಸಂಗೀತ ನಿರ್ದೇಶನವಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.