‘ನಟಸಾರ್ವಭೌಮ' ಚಿತ್ರದ ಆಡಿಯೊ ಬಿಡುಗಡೆ: ಫೇಸ್‌ಬುಕ್‌ನಲ್ಲಿ ಪುನೀತ್ ಆಮಂತ್ರಣ

7
ಹುಬ್ಬಳ್ಳಿಯಲ್ಲಿ ‘ನಟಸಾರ್ವಭೌಮ' ಚಿತ್ರದ ಆಡಿಯೊ ಬಿಡುಗಡೆ ಇಂದು

‘ನಟಸಾರ್ವಭೌಮ' ಚಿತ್ರದ ಆಡಿಯೊ ಬಿಡುಗಡೆ: ಫೇಸ್‌ಬುಕ್‌ನಲ್ಲಿ ಪುನೀತ್ ಆಮಂತ್ರಣ

Published:
Updated:

‌‌ಬೆಂಗಳೂರು: ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಇದೇ 5ರಂದು ಸಂಜೆ ‘ನಟಸಾರ್ವಭೌಮ’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ ನಡೆಯಲಿಸಿದ್ದು, ‘ಪವರ್‌ಸ್ಟಾರ್‌’ ಪುನೀತ್‌ರಾಜ್‌ಕುಮಾರ್‌ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಭಿಮಾನಿಗಳಿಗೆ ಫೇಸ್‌ಬುಕ್‌ ಮೂಲಕ ಕರೆ ನೀಡಿದ್ದಾರೆ.

ಪುನೀತ್‌ ಅವರ ಮನೆ ಮೇಲೆ ನಡೆದ ಐ.ಟಿ ದಾಳಿಯ ಪರಿಶೀಲನೆಯು ಶುಕ್ರವಾರ ರಾತ್ರಿಯೇ ಪೂರ್ಣಗೊಂಡಿದೆ. ಹಾಗಾಗಿ, ಕುಟುಂಬದ ಸದಸ್ಯರು ಮತ್ತು ಚಿತ್ರತಂಡದ ಸಮೇತ ಪುನೀತ್‌ ರಾಜ್‌ಕುಮಾರ್‌ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ನಮ್ಮ ನಟಸಾರ್ವಭೌಮ ಚಿತ್ರದ ಆಡಿಯೊ ಬಿಡುಗಡೆಯು ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಎಲ್ಲರೂ ಬನ್ನಿ. ಕಾರ್ಯಕ್ರಮವನ್ನು ಎಂಜಾಯ್‌ ಮಾಡಿ. ಜೈಹಿಂದ್‌ ಜೈ ಕರ್ನಾಟಕ’ ಎಂದು ಕೋರಿದ್ದಾರೆ.

ಪುನೀತ್‌ ಜೊತೆಗೆ ರಾಘವೇಂದ್ರ ರಾಜ್‌ಕುಮಾರ್, ಅವರ ಪತ್ನಿ ಮಂಗಳಾ ರಾಘವೇಂದ್ರ ರಾಜ್‌ಕುಮಾರ್‌, ವಿನಯ್ ರಾಜ್‌‌ಕುಮಾರ್ ಹುಬ್ಬಳ್ಳಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !