ಟ್ರೇಲರ್‌ ಬಿಡುಗಡೆ: ಡಿಫರೆಂಟ್‌ ಲುಕ್‌ನಲ್ಲಿ ‘ನಟಸಾರ್ವಭೌಮ’

7
ಪವನ್–ಪುನೀತ್ ಜೋಡಿಯ ಮೇಕಿಂಗ್ ಮೋಡಿ

ಟ್ರೇಲರ್‌ ಬಿಡುಗಡೆ: ಡಿಫರೆಂಟ್‌ ಲುಕ್‌ನಲ್ಲಿ ‘ನಟಸಾರ್ವಭೌಮ’

Published:
Updated:

‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ನಟಸಾರ್ವಭೌಮ’ ಚಿತ್ರದ ಟ್ರೇಲರ್‌ ಯೂಟ್ಯೂಬ್‌ನಲ್ಲಿ ಶುಕ್ರವಾರ ಬಿಡುಗಡೆಯಾಗಿದ್ದು, ಅಪ್ಪು ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಿಡುಗಡೆಯಾದ ಆರು ಗಂಟೆಗಳಲ್ಲಿ 7 ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ.

ಫೆಬ್ರುವರಿ 7ರಂದು ಚಿತ್ರ ಬಿಡುಗಡೆಯಾಗಲಿದೆ. ಪವನ್ ಒಡೆಯರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ರಾಕ್‌ಲೈನ್ ವೆಂಕಟೇಶ್.

‘ಅವನ ಮನೆಯಲ್ಲಿ ದೆವ್ವ ಇದೆ; ಅವನ ಮೈಮೇಲೆ ದೆವ್ವ ಬಂದಿದೆ’ ಎಂದು ಹಾಸ್ಯನಟ ಚಿಕ್ಕಣ್ಣ ಅವರ ಡೈಲಾಗ್‌ ಮೂಲಕ ಟ್ರೇಲರ್‌ ಬಿಚ್ಚಿಕೊಳ್ಳುತ್ತದೆ. ಟ್ರೈಲರ್ ಮೇಕಿಂಗ್ ಅದ್ಭುತವಾಗಿ ಮೂಡಿಬಂದಿದೆ. ಪುನೀತ್ ಕೈಗೆ ಕಟ್ಟಿರುವ ತಾಯಿತ, ಲುಕ್ ಹಾಗೂ ಪೋಷಕ ನಟರ ಹಾವಭಾವಗಳನ್ನು ಅವಲೋಕಿಸಿದರೆ ಸಿನಿಮಾದಲ್ಲಿ ಹಾರರ್ ಅಂಶಗಳು ಇವೆ ಎನ್ನುವ ಅನುಭವಾಗುತ್ತದೆ.

ಅಪ್ಪು ಅವರು ಭರ್ಜರಿಯಾದ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಆಕ್ಷನ್‌ಗಂತೂ ಕೊರತೆ ಇಲ್ಲ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ.

ಪವನ್ ಮತ್ತು ಪುನೀತ್ ಜೋಡಿ ‘ರಣವಿಕ್ರಮ’ ಚಿತ್ರದ ಮೂಲಕ ಮೋಡಿ ಮಾಡಿತ್ತು. ಈಗ ನಟಸಾರ್ವಭೌಮನ ಮೇಲೂ ಅದೇ ನಿರೀಕ್ಷೆ ಹೆಚ್ಚಿದೆ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !