‘ನಟ ಸಾರ್ವಭೌಮ’ನ ಲಿರಿಕಲ್‌ ವಿಡಿಯೊ ಸಾಂಗ್‌ ರಿಲೀಸ್‌

7

‘ನಟ ಸಾರ್ವಭೌಮ’ನ ಲಿರಿಕಲ್‌ ವಿಡಿಯೊ ಸಾಂಗ್‌ ರಿಲೀಸ್‌

Published:
Updated:

‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರದ ‘ಯಾರೋ ನಾನು...’ ಲಿರಿಕಲ್‌ ವಿಡಿಯೊ ಹಾಡು ಯೂಟ್ಯೂಬ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಹಾಡಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶ್ರೇಯಾ ಘೋಷಾಲ್‌ ಅವರ ಕಂಠಸಿರಿಯಲ್ಲಿ ಹಾಡು ಸೊಗಸಾಗಿ ಮೂಡಿಬಂದಿದೆ. ಸಖತ್ ಮೆಲೋಡಿಯಸ್ ಆಗಿರುವ ಈ ಹಾಡನ್ನು ಬರೆದಿರುವುದು ಕವಿರಾಜ್. ಡಿ. ಇಮ್ಮಾನ್ ಸಂಗೀತ ಸಂಯೋಜಿಸಿದ್ದಾರೆ.

‘ರಣವಿಕ್ರಮ’ ಚಿತ್ರದ ಬಳಿಕ ನಿರ್ದೇಶಕ ಪವನ್ ಒಡೆಯರ್ ಹಾಗೂ ಪುನೀತ್ ಈ ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದಾರೆ. ಚಿತ್ರದಲ್ಲಿ ಪುನೀತ್‌ ಅವರದ್ದು ಪತ್ರಕರ್ತನ ಪಾತ್ರವಂತೆ. ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. 

ಈ ಹಾಡಿನ ಮೇಕಿಂಗ್ ಕೂಡ ಮನಸೆಳೆಯುತ್ತಿದೆ. ಪುನೀತ್ ರಾಜ್‌ಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್ ಅವರು ಹೊಸ ಲುಕ್‌ನಲ್ಲಿ ಮಿಂಚು ಹರಿಸಿದ್ದಾರೆ.  

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !