ಶಿವರಾಜ್‌ಕುಮಾರ್ ನಟನೆಯ ‘131’ ಚಿತ್ರದ ಪ್ರಮುಖ ಖಳನಾಯಕನಾಗಿ ನಟ ನವೀನ್ ಶಂಕರ್ ಬಣ್ಣ ಹಚ್ಚಿದ್ದಾರೆ. ಪ್ರತಿ ಚಿತ್ರದಲ್ಲಿಯೂ ಭಿನ್ನ ಪಾತ್ರಗಳನ್ನು ಆಯ್ದುಕೊಳ್ಳುವ ಅವರು ತಮ್ಮ ಸಿನಿಪಯಣದ ಕುರಿತು ಮಾತನಾಡಿದ್ದಾರೆ...
ಭಿನ್ನ ಪಾತ್ರಗಳ ಮೂಲಕ ಛಾಪು
‘ಗುಲ್ಟು’ ಚಿತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟ ನವೀನ್, ನಟಿಸಿದ್ದು ನಾಲ್ಕಾರು ಚಿತ್ರಗಳಲ್ಲಿ ಮಾತ್ರ. ಆದರೆ ಪ್ರತಿ ಸಲ ಭಿನ್ನ ಪಾತ್ರಗಳಿಂದಲೇ ಛಾಪು ಮೂಡಿಸುತ್ತಿದ್ದಾರೆ. ‘ಭಿನ್ನವಾದ ಕಥೆ ಮತ್ತು ಪಾತ್ರಗಳನ್ನೇ ಒಪ್ಪಿಕೊಳ್ಳುವೆ. ನಟನಾಗಿ ಪ್ರಯೋಗ ಮಾಡಬೇಕು. ನಮಗೆ ಸವಾಲು ಎನಿಸುವ ಪಾತ್ರಗಳನ್ನು ನಿಭಾಯಿಸಬೇಕು. ಆಗಲೇ ನಾವಿಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯ’ ಎನ್ನುತ್ತಾರೆ ಅವರು.