ಶನಿವಾರ, ಮೇ 28, 2022
31 °C

ಈಗ ನೇಹಾ ಧೂಪಿಯಾ ಮಗಳ ಸರದಿ!

Neha Dhupia Updated:

ಅಕ್ಷರ ಗಾತ್ರ : | |

Deccan Herald

ಬಾಲಿವುಡ್‌ನಲ್ಲಿ ಈಚೆಗೆ ತಾರೆಯರ ಮದುವೆ ಸಂಭ್ರಮ, ನಟಿಯರ ಹೆರಿಗೆ ಸುದ್ದಿಗಳದ್ದೇ ಸಡಗರ. ಕರಣ್ ಜೋಹರ್, ಕರೀನಾ ಕಪೂರ್, ಸೋಹಾ ಅಲಿ ಖಾನ್ ಮಕ್ಕಳ ಸಂಭ್ರಮದ ನಂತರ ಈಗ ನಟಿ ನೇಹಾ ಧೂಪಿಯಾ ಮಗಳ ಸರದಿ.

ಈಚೆಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ನೇಹಾ, ತಮ್ಮ ಮಗಳ ಪಾದಗಳ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಬಿಳಿ ಬಣ್ಣದ ಫುಲ್ ಪ್ಯಾಂಟ್ ಮತ್ತು ಬಿಳಿ ಸಾಕ್ಸ್ ಧರಿಸುವ ಪುಟಾಣಿ ಕಾಲ್ಗಳಲ್ಲಿ ‘ಹಲೋ ವರ್ಲ್ಡ್‌’ ಎನ್ನುವ ಒಕ್ಕಣೆಯೂ ಇದೆ. ಅಂಗದ್ ಬೇಡಿ ಮತ್ತು ನೇಹಾ ತಮ್ಮ ಮಗಳಿಗೆ ಮೆಹರ್ ಧೂಪಿಯಾ ಎನ್ನುವ ಹೆಸರನ್ನೂ ಇಟ್ಟಿದ್ದಾರಂತೆ. 

ಈಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕರೀನಾ ಕಪೂರ್, ಕರಣ್, ಸೋಹಾ ಅಲಿ ಖಾನ್ ಅವರ ಮಕ್ಕಳದ್ದೇ  ಹೆಚ್ಚು ಸುದ್ದಿಯಾಗುತ್ತಿದ್ದು. ಸೆಲೆಬ್ರಿಟಿಗಳ ಮಕ್ಕಳು ಬಾಲ್ಯದಲ್ಲೇ ತಮ್ಮ ಪೋಷಕರಿಗಿಂತ ಹೆಚ್ಚು ಜನಪ್ರಿಯರಾಗಿದ್ದಾರೆ. ಈ ಸಾಲಿಗೆ ನೇಹಾ ಮಗಳು ಮೆಹರ್ ಹೆಸರು ಕೂಡಾ ಸೇರ್ಪಡೆಯಾದರೆ ಅಚ್ಚರಿಯಿಲ್ಲ.

ಒಟ್ಟಿನಲ್ಲಿ ಬಾಲಿವುಡ್‌ನಲ್ಲಿ ಸದ್ಯಕ್ಕೆ ಸಿನಿಮಾಗಳಿಗಿಂತ ದೀಪಿಕಾ–ರಣವೀರ್, ಪ್ರಿಯಾಂಕ ಚೋಪ್ರಾ–ನಿಕ್ಕ್ ಮದುವೆ ಹಾಗೂ ನೇಹಾ ಧೂಪಿಯಾ ಮಗಳ ಪಾದ ದರ್ಶನವೂ ಸುದ್ದಿಯಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು