ಪ್ರಭಂಜನ ಅವರು ನಿರ್ಮಿಸುತ್ತಿರುವ, ಹೇಮಂತ್ ಹೆಗಡೆ ನಿರ್ದೇಶಿಸುತ್ತಿರುವ ‘ನೆಟ್ ವರ್ಕ್’ ಚಿತ್ರಕ್ಕೆ ಚಾಲನೆ ದೊರಕಿದೆ.
ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ‘ನೆಟ್ ವರ್ಕ್’ ಬಗ್ಗೆ ಮಾತನಾಡಿದರು.
‘ನೆಟ್ ವರ್ಕ್’ ಒಂದು ಕುಟುಂಬದ ಕಥೆಯಲ್ಲ. ಸಾಕಷ್ಟು ಜನರು ಎದುರಿಸುತ್ತಿರುವ ಸಮಸ್ಯೆ. ಮೊಬೈಲ್‌ನಿಂದ ಉಪಯೋಗದಷ್ಟೇ, ದುಷ್ಪರಿಣಾಮಗಳೂ ಹೆಚ್ಚಿವೆ. ಮೊಬೈಲ್ ಬಂದ ಮೇಲೆ ಮಕ್ಕಳು ಆಟವಾಡುವುದನ್ನು ಮರೆತಿದ್ದಾರೆ. ಇಂಥ ಅನೇಕ ಸೂಕ್ಷ್ಮ ಸಂಗತಿಗಳತ್ತ ‘ನೆಟ್‌ವರ್ಕ್’ ಬೆಳಕು ಚೆಲ್ಲಿದೆ.
ಮೂವತ್ತು ವರ್ಷಗಳ ಹಿಂದೆ ನಾವು ಗೆಳೆಯರು ಸೇರಿ ‘ದೃಷ್ಟಿ’ ಎಂಬ ಸಂಸ್ಥೆ ಕಟ್ಟಿದ್ದೆವು. ಆ ತಂಡದಲ್ಲಿದ್ದ ಬಹುತೇಕರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಫ್ಟ್ ವೇರ್ ಕಂಪನಿ ಮಾಲೀಕರಾಗಿರುವ ಪ್ರಭಂಜನ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೇ 15ರಿಂದ ಬೆಂಗಳೂರಿನಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ನಟ ಹಾಗೂ ನಿರ್ದೇಶಕ ಹೇಮಂತ್ ಹೆಗಡೆ ಹೇಳಿದರು.
ರಾಜೇಶ್ ನಟರಂಗ, ಸುಚೇಂದ್ರ ಪ್ರಸಾದ್, ಕೆ.ಎಂ.ಚೈತನ್ಯ, ಸಾಕ್ಷಿ ಮೇಘನಾ, ರಕ್ಷಿಕಾ ತಾರಾಗಣದಲ್ಲಿದ್ದಾರೆ. ⇒v
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.