ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕ್ಕಿ ತಂಬೋಲಿ ಜೊತೆ ಫಟಾಫಟ್ ಮಾತು

Last Updated 25 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಮಹಾರಾಷ್ಟ್ರ ಮೂಲದ ನಿಕ್ಕಿ ತಂಬೋಲಿ, ಸಿನಿಮಾ ಲೋಕ ಪ್ರವೇಶಿಸಿದ್ದು ಮಾಡೆಲಿಂಗ್ ಮೂಲಕ. ತಮಿಳಿನಲ್ಲಿ ಬಿಡುಗಡೆ ಆಗಿರುವ ‘ಕಾಂಚನ–3’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಅದೇ ಸಿನಿಮಾದಲ್ಲಿ ಕನ್ನಡದಲ್ಲಿ ಡಬ್ ಆಗಿ ತೆರೆಗೆ ಬರುತ್ತಿದೆ.

ಸಿನಿಮಾದ ಕನ್ನಡ ಅವತರಣಿಕೆಯ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ನಿಕ್ಕಿ, ‘ಸಿನಿಮಾ ಪುರವಣಿ’ಗೆ ಮಾತಿಗೆ ಸಿಕ್ಕಿದ್ದರು. ಅವರ ಜೊತೆ ನಡೆಸಿದ ಫಟಾಫಟ್ ಮಾತುಕತೆ ಹೀಗಿತ್ತು:

* ‘ಕಾಂಚನ–3’ ಸಿನಿಮಾ ಕನ್ನಡದಲ್ಲಿ ಕೂಡ ತೆರೆಗೆ ಬರುತ್ತದೆ ಎಂದು ಭಾವಿಸಿದ್ದಿರಾ?

ಯಾವ ಸಂದರ್ಭದಲ್ಲೂ ಹಾಗೆ ಅಂದುಕೊಂಡಿರಲಿಲ್ಲ. ‘ಕಾಂಚನ–3’ ಸಿನಿಮಾ ನನ್ನ ಪಾಲಿಗೆ ಕನಸು ನನಸಾಗುವುದಕ್ಕೆ ಸಮನಾದದ್ದು. ಇದು ಕನ್ನಡದಲ್ಲಿ ಬರುತ್ತಿರುವುದು ನನಗೆ ಖುಷಿ ತಂದಿದೆ. ಜನ ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬುದರತ್ತ ಈಗ ನನ್ನ ಕುತೂಹಲ ನೆಟ್ಟಿದೆ. ನಾನು ಸಿನಿಮಾ ರಂಗಕ್ಕೆ ಬರುತ್ತೇನೆ ಎಂದು ಕೂಡ ಯಾವತ್ತೂ ಭಾವಿಸಿರಲಿಲ್ಲ. ಇದು ನನ್ನ ಮೊದಲ ಸಿನಿಮಾ.

ಸಿನಿಮಾ ಮಾಡುವುದು ನನ್ನ ಕನಸಿನಲ್ಲಿ ಇರದಿದ್ದರೂ, ಸಿನಿಮಾದಲ್ಲಿ ಅಭಿನಯಿಸಬೇಕು ಎಂಬುದು ನನ್ನ ಹಣೆ ಬರಹದಲ್ಲಿ ಅದು ಬರೆದಿತ್ತು!

* ಕನ್ನಡ ಸಿನಿಮಾ ಲೋಕದ ಜೊತೆ ಸಂಬಂಧ ಹೇಗಿದೆ?

ಕನ್ನಡ ನನಗೆ ಸ್ವಲ್ಪಸ್ವಲ್ಪ ಬರುತ್ತದೆ. ನಾನು ಕನ್ನಡದ ಜೊತೆ ಬಾಲ್ಯದಿಂದಲೂ ಸಂಬಂಧ ಹೊಂದಿದ್ದೇನೆ. ಚಿಕ್ಕವಳಾಗಿದ್ದಾಗ ಔರಂಗಾಬಾದ್‌ ಮತ್ತು ಮುಂಬೈನಲ್ಲಿ ನನಗೆ ಹಲವು ಜನ ಕನ್ನಡದ ಸ್ನೇಹಿತರು ಇದ್ದರು. ಆದರೆ ಕನ್ನಡ ಸಿನಿಮಾ ನೋಡಿ ಅಭ್ಯಾಸ ಇರಲಿಲ್ಲ.

ಈ ಸಿನಿಮಾ ಚಿತ್ರೀಕರಣ ಒಂದದೂವರೆ ವರ್ಷ ನಡೆದಿದೆ. ಎಲ್ಲರೂ ಇಲ್ಲಿ ಕುಟುಂಬದ ಸದಸ್ಯರ ರೀತಿಯಲ್ಲಿ ಇದ್ದೆವು. ನಾನು ಇದರಲ್ಲಿ ಆರಂಭದಿಂದ ಅಂತ್ಯದವರೆಗೂ ಸಿನಿಮಾದಲ್ಲಿ ಇರುತ್ತೇನೆ. ಈ ಸಿನಿಮಾದಲ್ಲಿ ಬೇರೆ ಯಾರೋ ನನ್ನ ದನಿಯನ್ನು ಕನ್ನಡದಲ್ಲಿ ಡಬ್ ಮಾಡಲಿದ್ದಾರೆ.

* ಕನಸಿನ ಪಾತ್ರ ಯಾವುದು?

ನನಗೆ ಪೊಲೀಸ್ ಪಾತ್ರ ನಿಭಾಯಿಸಬೇಕು ಎಂಬ ಕನಸಿದೆ. ಅಲ್ಲದೆ, ಆ್ಯಕ್ಷನ್‌ ಪಾತ್ರ ಮಾಡಬೇಕು, ನೆಗೆಟಿವ್ ಪಾತ್ರಗಳನ್ನೂ ಮಾಡಬೇಕು. ಅಭಿನಯಿಸಲು ಸವಾಲು ಅನ್ನಿಸುವ ಪಾತ್ರ ನಿಭಾಯಿಸಬೇಕು. ಮಾಡೆಲಿಂಗ್ ಕ್ಷೇತ್ರದಿಂದ ಬರುವವರು ಸಾಮಾನ್ಯವಾಗಿ ಗ್ಲಾಮರಸ್ ‍ಪಾತ್ರಗಳನ್ನೇ ನಿಭಾಯಿಸುತ್ತಾರೆ ಎಂಬ ಮಾತಿದೆ. ನಾನು ಎಲ್ಲ ಬಗೆಯ ಪಾತ್ರಗಳನ್ನೂ ಮಾಡಲು ಬಯಸುವೆ. ಗ್ಲಾಮರ್ ಪಾತ್ರವನ್ನೂ ನಿಭಾಯಿಸಿದ್ದೇನೆ. ‘ಕಾಂಚನ–3’ಗೆ ಸಹಿ ಮಾಡಿದ ನಂತರ ಬೇರೆ ಭಾಷೆಗಳಲ್ಲೂ ಸಿನಿಮಾ ಮಾಡಿದ್ದೇನೆ. ತೆಲುಗಿನ ಒಂದು ಸಿನಿಮಾ ಒಂದೆರಡು ತಿಂಗಳುಗಳಲ್ಲಿ ಬಿಡುಗಡೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT